ವೃಕ್ಷಾಸನ ಮಾಡಿದ ಪುಟಾಣಿಗಳು

h21-taksh
Published on

ಹುಬ್ಬಳ್ಳಿ: ವಿಶ್ವ ಯೋಗ ದಿನಾಚರಣೆ ನಿಮಿತ್ತ ಉಣಕಲ್‌ನ ಶ್ರೀ ಸಿದ್ದೇಶ್ವರ ನಗರದ ತಕ್ಷ್ ಪ್ರಿ-ನರ್ಸರಿ ಶಾಲೆ ಆವರಣದಲ್ಲಿ ಮಕ್ಕಳಿಗೆ ವಿವಿಧ ಯೋಗಾಸನಗಳನ್ನು ಹೇಳಿಕೊಡಲಾಯಿತು. ವೃಕ್ಷಾಸನ, ಭುಜಂಗಾಸನ, ಸೂರ್ಯ ನಮಸ್ಕಾರ ಸೇರಿ ವಿವಿಧ ಆಸನಗಳನ್ನು ಹೇಳಿಕೊಡಲಾಯಿತು. ಪ್ರಾಚಾರ್ಯೆ ಅಪರ್ಣಾ ಕೊಹ್ಲಿ, ಶಿಕ್ಷಕಿಯರಾದ ಸಾವಿತ್ರಿ, ಶ್ರೀದೇವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net