ಅಸ್ಪಶ್ಯತೆ ವಿರುದ್ಧ ವಚನ ಚಾಟಿ

BIRUR basava
ಬೀರೂರು ಪುರಸಭೆ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಲಾಯಿತು. ಮುಖ್ಯಾಧಿಕಾರಿ ವಿ.ಡಿ.ಶಾಂತಲಾ, ಸದಸ್ಯರಾದ ಬಿ.ಆರ್.ಮೋಹನ್‌ಕುಮಾರ್, ಲೋಕೇಶಪ್ಪ, ವ್ಯವಸ್ಥಾಪಕ ಪ್ರಕಾಶ್, ನೂರುದ್ದೀನ್, ಲಕ್ಷ್ಮಣ್ ಇತರರಿದ್ದರು.
Published on

ಬೀರೂರು: ಸಮಾಜದಲ್ಲಿ ಅಸಮಾನತೆ ಹೋಗಬೇಕು. ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕುವ ವ್ಯವಸ್ಥೆ ನಿರ್ಮಾಣ ಆಗಬೇಕು ಎಂದು ಬಸವಣ್ಣನವರು ಶ್ರಮಿಸಿದ್ದರು ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲಾ ಹೇಳಿದರು.

ಪುರಸಭೆ ಕಚೇರಿಯಲ್ಲಿ ಶನಿವಾರ ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿ, ಅಸ್ಪಶ್ಯತೆ ವಿರುದ್ಧ ವಚನಗಳ ಮೂಲಕವೇ ಚಾಟಿ ಬೀಸಿದ ಬಸವಣ್ಣ ಸಮಾನತೆಯ ಸಮಾಜ ಕಟ್ಟುವ ಸಲುವಾಗಿ ಶ್ರಮಿಸಿದ್ದರು. ಸಮಾಜದಲ್ಲಿದ್ದ ಮೇಲು-ಕೀಳಿನ ಆಚರಣೆ ತಡೆಗಟ್ಟಲು ಶರಣರ ಪಂಥವನ್ನೇ ಸ್ಥಾಪಿಸಿ ವಚನಕ್ರಾಂತಿ ಮಾಡಿದರು. ಅಂಥ ಮಹಾಪುರುಷರನ್ನು ನಿತ್ಯವೂ ಸ್ಮರಿಸುವ ಉದ್ದೇಶದಿಂದ ಸರ್ಕಾರಿಗೆ ಕಚೇರಿಗಳಲ್ಲಿ ಅವರ ಭಾವಚಿತ್ರ ಇರಿಸಲು ಸರ್ಕಾರ ನಿರ್ದೇಶನ ನೀಡಿದೆ. ಬಸವಣ್ಣನವರ ಆಶಯಕ್ಕೆ ತಕ್ಕಂತೆ ಎಲ್ಲರೂ ಎಲ್ಲರ ಒಳಿತಿಗಾಗಿ ಕೈಜೋಡಿಸಬೇಕು ಎಂದರು.
ಪುರಸಭೆ ಸದಸ್ಯ ಬಿ.ಆರ್.ಮೋಹನ್‌ಕುಮಾರ್, ಬಸವಣ್ಣನವರ ತತ್ವ ಆಚರಣೆಯಲ್ಲಿ ನಾವೆಲ್ಲ ಸೋಲುತ್ತಿದ್ದೇವೆ ಎಂದು ಹೇಳಿದರು.
ಪುರಸಭೆ ಸದಸ್ಯರಾದ ಲೋಕೇಶಪ್ಪ, ರಾಜು, ಪರಿಸರ ಅಭಿಯಂತರ ನೂರುದ್ದೀನ್, ವ್ಯವಸ್ಥಾಪಕ ಪ್ರಕಾಶ್, ಕಂದಾಯ ಅಧಿಕಾರಿ ದೀಪಕ್, ಗಿರಿರಾಜ್, ಹಿರಿಯ ಆರೋಗ್ಯ ನಿರೀಕ್ಷಕ ಲಕ್ಷ್ಮಣ್, ವಿಶ್ವನಾಥ, ಜಯಮ್ಮ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net