ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನ ಕೊಠಡಿಯಲ್ಲಿ ಮತಯಂತ್ರಗಳು, ಬಿಗಿ ಪೊಲೀಸ್ ಬಂದೋಬಸ್ತ್

0992
Published on

ಚಿಕ್ಕಬಳ್ಳಾಪುರ: ಲೋಕಸಭಾ ಕ್ಷೇತ್ರದ ಚುನಾವಣೆಯ 2,326 ಮತಗಟ್ಟೆಗಳ ಮತಯಂತ್ರಗಳನ್ನು ಚಿಕ್ಕಬಳ್ಳಾಪುರ ತಾಲೂಕಿನ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನ ಕೊಠಡಿಯಲ್ಲಿ ಸುರಕ್ಷಿತವಾಗಿಡಲಾಗಿದೆ.

ಲೋಕಸಭಾ ಕ್ಷೇತ್ರ ವ್ಯಾಪ್ತಿಯು 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು ಗೌರಿಬಿದನೂರು 259, ಬಾಗೇಪಲ್ಲಿ 267, ಚಿಕ್ಕಬಳ್ಳಾಪುರ 252, ಯಲಹಂಕ 411, ಹೊಸಕೋಟೆ 293, ದೇವನಹಳ್ಳಿ 292, ದೊಡ್ಡಬಳ್ಳಾಪುರ 276 ಮತ್ತು ನೆಲಮಂಗಲ 276 ಸೇರಿದಂತೆ 2,326 ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿತ್ತು. ಮತದಾನದ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಶುಕ್ರವಾರ ರಾತ್ರಿಯೇ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಮತಯಂತ್ರಗಳನ್ನು ನಾಗಾರ್ಜುನ ಇಂಜನಿಯರಿಂಗ್ ಕಾಲೇಜಿಗೆ ಸಾಗಿಸಲಾಯಿತು. ಬಳಿಕ ಕೊಠಡಿಯಲ್ಲಿ ಮತಯಂತ್ರಗಳನ್ನು ಇರಿಸಿ ಕಟ್ಟೆಚ್ಚರ ವಹಿಸಲಾಗಿದೆ.

ಮತಯಂತ್ರಗಳನ್ನಿಟ್ಟಿರುವ ಕೊಠಡಿಗಳಿಗೆ ಬಿಗಿ ಬಂದೋ ಬಸ್ತ್ ಕಲ್ಪಿಸಲಾಗಿದೆ. ಕೊಠಡಿಯ ಕಿಟಕಿಗಳನ್ನು ಕಬ್ಬಿಣದ ತಗಡಿನಿಂದ, ಒಳ ಭಾಗದಲ್ಲಿ ಫ್ಲೆöÊವುಡ್ ಶೀಟ್‌ನಿಂದ ಮುಚ್ಚಲಾಗಿದೆ. ಹಾಗೆಯೇ ಕೊಠಡಿಯ ಬಾಗಿಲಿನ ಒಳಗೆ ಮತ್ತು ಹೊರಗೆ ಫ್ಲೆöÊವುಡ್ ಶೀಟ್‌ನಿಂದ ಮುಚ್ಚಿದ್ದರ ಜತೆಗೆ ಬೀಗ ಜಡಿದು, ಸೀಲ್ ಮಾಡಲಾಗಿದೆ. ಕೊಠಡಿ ಹೊರ ಭಾಗದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನೂ ಡಿ ಮಸ್ಟರಿಂಗ್ ಕೊಠಡಿ ಬಳಿ ಯಾರೂ ಸುಳಿಯದಂತೆ ಎಚ್ಚರ ವಹಿಸಲಾಗಿದೆ.

* ಜೂ.4 ಕ್ಕೆ ಮತ ಎಣಿಕೆ

ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಜೂ.4 ರಂದು ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಸಲಾಗುತ್ತದೆ.

ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿ ಭಾಗದಲ್ಲಿ ಮತ ಎಣಿಕೆ ಕೇಂದ್ರವನ್ನು ಗುರುತಿಸಿದ್ದು ಹೆಚ್ಚಿನ ಜನರು ಸೇರಿದರೂ ಸುಗಮವಾಗಿ ನಿಯಂತ್ರಣ, ಕೊಠಡಿ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಕರ್ಯಗಳ ಹಿನ್ನೆಲೆಯಲ್ಲಿ ಈ ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದು ಇಲ್ಲಿ ಈ ಹಿಂದೆ ಸಹ ಹಲವು ಬಾರಿ ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣಾ ಪ್ರಕ್ರಿಯೆ ನಡೆದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net