

ಮುರಗೋಡ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತಕ್ಷೇತ್ರದ ಮರಕುಂಬಿ, ಹಿರೇಕೊಪ್ಪ ಕೆ.ಎಂ., ಚಿಕ್ಕೊಪ್ಪ ಕೆ.ಎಂ., ದುಂಡನಕೊಪ್ಪ, ಕಾರಿಮನಿ, ರುದ್ರಾಪುರ ಹಾಗೂ ಗಿರಿನಗರ (ರುದ್ರಾಪೂರ ತಾಂಡೆ) ಗ್ರಾಮಗಳ ವಿವಿಧ ಕಡೆಗಳಲ್ಲಿ ಗುರುವಾರ ಮತದಾನ ಜಾಗೃತಿ ಅಭಿಯಾನ ಅಂಗವಾಗಿ ಇವಿಎಂ ಹಾಗೂ ವಿವಿ ಪ್ಯಾಟ್‌ಗಳ ಪ್ರಾತ್ಯಕ್ಷಿಕೆ ಜರುಗಿತು.
ಸೆಕ್ಟೆರ್ ಅಧಿಕಾರಿ ಆರ್.ಎಲ್.ಬಾಗಿಲದ ಮಾತನಾಡಿ, ಮತದಾರರು ಇವಿಎಂ ಹಾಗೂ ವಿವಿ ಪ್ಯಾಟ್‌ಗಳ ಪ್ರಾತ್ಯಕ್ಷಿಕೆಯಲ್ಲಿ ಮತ ಚಲಾಯಿಸುವ ಮೂಲಕ ತಮ್ಮ ಸಂದೇಹ ಖಾತ್ರಿಪಡಿಸಿಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷ ಮಹಾಂತೇಶ ನರಸಣ್ಣವರ, ಗ್ರಾಮ ಸಹಾಯಕ ಯು.ಐ.ಬೋಗೂರ, ಶ್ರೀಶೈಲ ಗೋರವನಕೊಳ್ಳ, ಗ್ರಾಮಲೆಕ್ಕಿಗ ಎಸ್.ಬಿ.ಗೌಡರ, ಎಸ್.ಬಿ.ಬೂತಾಳೆ, ಸುಭಾಷ ಹರಿಜನ, ಈರಪ್ಪ ಪರುನವರ, ಅರ್ಜುನ ಮಾದರ, ಶಿವಾನಂದ ಕನಕನ್ನವರ, ಬಸವರಾಜ ಹುದ್ದಾರ, ಬಿಎಲ್‌ಒಗಳಾದ ಎಂ.ಎಂ.ಬಂದಕ್ಕನವರ, ಶೋಭಾ ಮುಳಕೂರ, ಎಸ್.ಆರ್.ಪಾಟೀಲ, ಎ.ಎಸ್.ರುದ್ರನಾಯ್ಕರ, ಆರ್.ಸಿ.ಗೌಡತಿ, ಬಸವರಾಜ ಹೊಂಡನೈನವರ ಇದ್ದರು.