ಮತದಾನ ಪ್ರಕ್ರಿಯೆ ಜಾಗೃತಿ ಅಗತ್ಯ

hadagali awerness
ಮತದಾರರ ದಿನಾಚರಣೆ ನಿಮಿತ್ತ ಹೂವಿನಹಡಗಲಿಯ ಜಿಪಿಜಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎಚ್.ಮಲ್ಲಿಕಾರ್ಜುನ ವಿದ್ಯಾರ್ಥಿಗಳಿಗೆ ಚುನಾವಣಾ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕರಾದ ಬನ್ನೆಪ್ಪ, ಅನ್ನದಾನಸ್ವಾಮಿ ಹಿರೇಮಠ, ಚಿತ್ರಕಲಾ ಶಿಕ್ಷಕ ಗಂಗಾಧರ ಇದ್ದರು.
Published on

ಹೂವಿನಹಡಗಲಿ: ದೇಶದ ಭವಿಷ್ಯವನ್ನು ರೂಪಿಸುವ ಯುವ ಮತದಾರರಿಗೆ ಮತದಾನದ ಪ್ರಕ್ರಿಯೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಎಸ್ಸೆಸ್ಸೆಲಿ ನೋಡಲ್ ಅಧಿಕಾರಿ ಎಚ್.ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಜಿಪಿಜಿ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಶಾಲಾ ಶಿಕ್ಷಣ ಇಲಾಖೆ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ತಾಲೂಕಿನ ಪ್ರೌಢಶಾಲೆ ಮಕ್ಕಳಿಗೆ ತಿಳಿದಿರಲು ಮತದಾನ ಹಾಗೂ ಮತದಾರನ ಜವಾಬ್ದಾರಿ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಸಾಕ್ಷರತಾ ಕ್ಲಬ್‌ನಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಮಕ್ಕಳು ಪಾಲಕರು, ನೆರೆಹೊರೆಯವರಿಗೆ ಹೊಸ ಮತದಾರರ ನೋಂದಣಿ ಹಾಗೂ ಮತದಾರರ ಗುರುತಿನ ಚೀಟಿಗಳಲ್ಲಿ ಬದಲಾವಣೆಗಳಿದ್ದಲ್ಲಿ ಸರಿಪಡಿಸಲು ಮಾಹಿತಿ ನೀಡುವಂತೆ ತಿಳಿಸಿದರು. ಶಿಕ್ಷಕರಾದ ಬನ್ನೆಪ್ಪ, ಅನ್ನದಾನಸ್ವಾಮಿ ಹಿರೇಮಠ, ಚಿತ್ರಕಲಾ ಶಿಕ್ಷಕ ಗಂಗಾಧರ ಹಾಗೂ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net