ಕಾರವಾರ, ಶಿರಸಿಯಲ್ಲಿ ಕೈ ಕೊಟ್ಟ ಮತ ಯಂತ್ರಗಳು

Voting
Published on

ಕಾರವಾರ: ಜಿಲ್ಲೆಯ ವಿವಿಧೆಡೆ ಮತಯಂತ್ರಗಳು ಕೈಕೊಟ್ಟು ಮತದಾನಕ್ಕೆ‌ಅಡಚಣೆಯಾಗಿದೆ.
ಕಾರವಾರದ ಸೇಂಟ್ ಮೈಕಲ್ ಸ್ಕೂಲ್ನ 107 ನೆ ಸಂಖ್ಯೆಯ ಮತಗಟ್ಟೆ, ಶಿರವಾಡದ 62 ನೇ ಮತಗಟ್ಟೆಯಲ್ಲಿ ಬೆಳಗ್ಗೆ 8 ಗಂಟೆಯಾದರೂ ಮತದಾನ ಪ್ರಾರಂಭವಾಗಿಲ್ಲ.
ಶಿರಸಿಯ ಆವೇಮರಿಯಾ ಶಾಲೆಯ 74 ನೇ ಮತಗಟ್ಟೆಯಲ್ಲಿ ಮತ ಯಂತ್ರ ಕೈ ಕೊಟ್ಟು ಮತದಾನ ಮುಕ್ಕಾಲು ಗಂಟೆ ವಿಳಂಬವಾಯಿತು.

*ಸಿಬ್ಬಂದಿಗೆ ಅನಾರೋಗ್ಯ*


ಚುನಾವಣಾ ಕರ್ತವ್ಯಕ್ಕೆ ಬಂದ ಪ್ರಕಾಶ ಕೋರಿ ಎಂಬ ಸಿಬ್ಬಂದಿಗೆ ಎದೆನೋವು ಕಾಣಿಸಿಕೊಂಡಿತು.
ಮಾರಿಗುಡಿ ಶಾಲೆಯಿಂದ ಸರಕಾರಿ ಅಸ್ಪತ್ರೆಗೆ ತರಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಬೆರೆ ಕಡೆ ಒಯ್ಯಲಾಗುತ್ತಿದೆ.
ಬೇರೆ ಸಿಬ್ಬಂದಿ ನೇಮಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net