ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಿ, ವಿಕಲ ಚೇತನರ ಸಂಘ ಮನವಿ

Siraguppa Handicapped Voting Awarness
ಸಿರಗುಪ್ಪದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರಿಂದ ಮತದಾನ ಜಾಗೃತಿ ಜಾಥಾಕ್ಕೆ ತಾಪಂ ಇಒ ಎಂ.ಬಸಪ್ಪ ಚಾಲನೆ ನೀಡಿದರು.
Published on

ಸಿರಗುಪ್ಪ: ಅಂಗವಿಕಲರಾದ ನಾವೇ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸುತ್ತಿದ್ದೇವೆ. ಸಹಜವಾಗಿರುವ ನೀವೂ ಮೇ.10ರಂದು ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಿ ಎಂದು ವಿಕಲ ಚೇತನರ ಸಂಘದ ತಾಲೂಕು ಅಧ್ಯಕ್ಷ ಸಾಬೇಶ್‌ನಾಯಕ ಮನವಿ ಮಾಡಿದರು.

ನಗರದ ತಾಪಂ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರಿಂದ ಮತದಾನ ಜಾಗೃತಿ ಜಾಥಾದಲ್ಲಿ ಬುಧವಾರ ಮಾತನಾಡಿದರು. ಮತದಾನ ಪವಿತ್ರ ಕಾರ್ಯ. ರಾಜ್ಯದ ಭವಿಷ್ಯಕ್ಕೆ ಅಭಿವೃದ್ಧಿ ಪರ ನಾಯಕನನ್ನು ಆರಿಸಲು ಚುನಾವಣೆ ಒಂದೇ ಮಾರ್ಗವಾಗಿದೆ. ಆದ್ದರಿಂದ ಮತದಾನ ಮಾಡುವ ಮೂಲಕ ಉತ್ತಮ ನಾಯಕನನ್ನು ಆರಿಸೋಣ ಎಂದರು.

ತಾಪಂ ಇಒ ಎಂ.ಬಸಪ್ಪ ಜಾಥಾಕ್ಕೆ ಚಾಲನೆ ನೀಡಿದರು. ತಾಪಂ ವ್ಯವಸ್ಥಾಪಕಿ ಸುಜಾತಾ, ಸಿಬ್ಬಂದಿ ಈರಣ್ಣ, ರಮೇಶ ಹಾಗೂ ಸಂಘದ ಪದಾಧಿಕಾರಿಗಳಾದ ಈರಮ್ಮ, ರಮೇಶ, ಈರಣ್ಣ, ಮಾರೆಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net