ತಾಂತ್ರಿಕ ತೊಂದರೆಯಿಂದ ಮತದಾನ ವಿಳಂಬ

27 gkp 04
ಚಿಕ್ಕತ್ತೂರಿನಲ್ಲಿ ಮತಯಂತ್ರ ಸ್ಥಗಿತಗೊಂಡು ಮತದಾನಕ್ಕಾಗಿ ಕಾದು ನಿಂತಿರುವ ಮತದಾರರು.
Published on

ಕುಶಾಲನಗರ: ಕೂಡುಮಂಗಳೂರು ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು, ದೊಡ್ಡತ್ತೂರು ಗ್ರಾಮಗಳ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿಕ್ಕತ್ತೂರಿನ 154ನೇ ಮತಗಟ್ಟೆಯಲ್ಲಿ ಶುಕ್ರವಾರ ಮತಯಂತ್ರದ ತಾಂತ್ರಿಕ ತೊಂದರೆಯಿಂದಾಗಿ ಒಂದು ಗಂಟೆ ಮತದಾನ ಸ್ಥಗಿತಗೊಂಡಿತು.

ನಂತರ ಬದಲಿ ಮತಯಂತ್ರವನ್ನು ಅಳವಡಿಕೆ ಮಾಡಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು. ಚಿಕ್ಕತ್ತೂರು, ದೊಡ್ಡತ್ತೂರು ಗ್ರಾಮ ವ್ಯಾಪ್ತಿಯಲ್ಲಿ 1,150 ಮತದಾರರು ಇರುವ ಮತಗಟ್ಟೆಯಾಗಿದ್ದು, ಹೆಚ್ಚು ಮತದಾರರ ಜತೆಗೆ ಮತಯಂತ್ರ ರಿಪೇರಿ ಅದ ಕಾರಣದಿಂದಾಗಿ ಮತದಾನದ ಸಮಯ ಮುಗಿದ ನಂತರ ರಾತ್ರಿ 7.45 ಗಂಟೆವರೆಗೆ ಮತದಾನ ನಡೆಯಿತು. 6 ಗಂಟೆಯ ನಂತರ ಮತದಾನಕ್ಕೆ ಅಗಮಿಸಿದ ಎಲ್ಲ ಮತದಾರರಿಗೆ ಸೆಕ್ಟರ್ ಅಧಿಕಾರಿ ಪುಟ್ಟಸ್ವಾಮಿ ಅವರ ಸೂಚನೆಯಂತೆ ಶಾಲಾ ಕಾಂಪೌಂಡ್ ಒಳಗಡೆ ಬಂದ ಎಲ್ಲರಿಗೂ ಟೋಕನ್ ನೀಡಿ ಮತ ಚಲಾಯಿಸಲು ಅವಕಾಶ ಒದಗಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net