ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್‌ನಲ್ಲಿ ಮತದಾನದ ಅರಿವಿನ ಬರಹ

bus ticket
Published on

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆ ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಕರಿಗೆ ವಿತರಿಸಲಾಗುವ ಟಿಕೆಟ್‌ಗಳಲ್ಲಿ ಮತದಾನದ ಅರಿವಿನ ಬರಹಗಳನ್ನು ಬಳಸುವ ಮೂಲಕ ಕೆಎಸ್‌ಆರ್‌ಟಿಸಿ ಜಾಗೃತಿಗೆ ಮುಂದಾಗಿದೆ.

ಕೆಎಸ್‌ಆರ್‌ಟಿಸಿಯ ಎಲ್ಲ ಬಸ್‌ಗಳಲ್ಲಿ ಪ್ರಯಾಣಿಕರಿಗೆ ನೀಡುವ ಟಿಕೆಟ್‌ಗಳ ಮೇಲೆ ‘ಮತದಾನ ನಮ್ಮೆಲ್ಲರ ಹಕ್ಕು ದಿನಾಂಕ ಏ.26 ಹಾಗೂ ಮೇ 7ರಂದು ತಪ್ಪದೇ ಮತದಾನ ಮಾಡಿ’ ಎಂಬ ಬರಹವನ್ನು ಪ್ರತೀ ಟಿಕೆಟ್ ಅಡಿಭಾಗದಲ್ಲಿ ಮುದ್ರಿಸಲಾಗಿದೆ. ಟಿಕೆಟ್ ಪಡೆದುಕೊಳ್ಳುವ ಪ್ರಯಾಣಿಕರು ಮತದಾನದ ದಿನವನ್ನು ಸ್ಮರಿಸಿಕೊಂಡು ಅಂದು ಮತ ಹಕ್ಕು ಚಲಾಯಿಸಲು ಪ್ರೇರಣೆ ನೀಡಲಿ ಎಂಬ ಕಾರಣದಿಂದ ಇಂತಹ ಉಪಕ್ರಮ ಕೈಗೊಳ್ಳಲಾಗಿದೆ.

ಈ ಹಿಂದೆಯೂ ವಿವಿಧ ಸಂದರ್ಭದಲ್ಲಿ ಸಂಸ್ಥೆಯು ಟಿಕೆಟ್ ಮೇಲೆ ಜಾಗೃತಿ ಬರಹಗಳನ್ನು ನಮೂದಿಸಿ ಜನರಿಗೆ ತಿಳಿವಳಿಕೆ ನೀಡುವ ಯತ್ನ ಮಾಡಲಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net