ಆಮಿಷಕ್ಕೊಳಗಾಗದೆ ಮತ ಚಲಾಯಿಸಿ

9 HATTI 1
Published on

ಹಟ್ಟಿಚಿನ್ನದಗಣಿ: ಪ್ರಜಾಪ್ರಭುತ್ವದ ಯಶಸ್ಸು ಮತದಾನದಲ್ಲಿ ಅಡಗಿದೆ ಎಂದು ಪ.ಪಂ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಹೇಳಿದರು.
ಪಟ್ಟಣದ ಹಳೆಯ ಬಸ್ ನಿಲ್ದಾಣದ ಬಳಿ ಪ.ಪಂ ಆಡಳಿತದಿಂದ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನದಲ್ಲಿ ಶನಿವಾರ ಸಂಜೆ ಮಾತನಾಡಿದರು. 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳುವುದರ ಜತೆಗೆ, ಅವಶ್ಯವಾಗಿ ಮತದಾನ ಮಾಡಬೇಕು. ಒಂದು ಮತದಿಂದ ಒಬ್ಬ ವ್ಯಕ್ತಿಯ ಭವಿಷ್ಯ ನಿರ್ಧಾರವಾಗುವುದರ ಜತೆಗೆ ರಾಜ್ಯ ಹಾಗೂ ದೇಶದ ಹಣೆಬರಹವನ್ನು ನಿರ್ಧರಿಸಬಹುದಾಗಿದೆ. ಸಾಮಾನ್ಯ ವ್ಯಕ್ತಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನ ಈ ಅವಕಾಶ ಕಲ್ಪಿಸಿದೆ. ಜಾತಿ, ಧರ್ಮ, ವರ್ಗ ರಹಿತ ಸಮಾಜ ನಿರ್ಮಾಣಕ್ಕಾಗಿ ಅಮಿಷ, ಒತ್ತಡ ಹಾಗೂ ಲಾಬಿಗೊಳಗಾಗದೆ ಮತದಾನ ಮಾಡಬೇಕೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net