ನಂಜನಗೂಡಿನಲ್ಲಿ ಮತದಾನ ಜಾಗೃತಿ

IMG-20240404-WA0010
Published on

ನಂಜನಗೂಡು: ತಾಲೂಕು ಪಂಚಾಯಿತಿಯಿಂದ ಗುರುವಾರ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಹಾಗೂ ಸಮಾಜದ ವಿವಿಧ ವರ್ಗಗಳಲ್ಲಿ ವ್ಯಾಪಕವಾಗಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಅಂಗವಿಕಲರಿಂದ ಮತದಾನ ಜಾಗೃತಿ ರ‌್ಯಾಲಿ ನಡೆಸಲಾಯಿತು.


ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಮಾತನಾಡಿದರು. ಕಡ್ಡಾಯ ಮತದಾನ ಮಾಡುವಂತೆ ಅಂಗವಿಕಲರು ಸಹಿ ಸಂಗ್ರಹಣೆ ಮಾಡಿದರು. ತಾಲೂಕು ಪಂಚಾಯಿತಿ ಕಚೇರಿಯಿಂದ ಹುಲ್ಲಹಳ್ಳಿ ವೃತ್ತದ ಮಾರ್ಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಮತದಾನ ಜಾಗೃತಿ ಮೂಡಿಸಲಾಯಿತು.


ನರೇಗಾ ಸಹಾಯಕ ನಿರ್ದೇಶಕ ಶಿವಕುಮಾರ್, ತಾಲೂಕು ಯೋಜನಾಧಿಕಾರಿ ಚಿತ್ರಾ, ವ್ಯವಸ್ಥಾಪಕ ಮಹದೇವ ನಾಯಕ, ರಂಗಸ್ವಾಮಿ, ಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net