

ಹುಬ್ಬಳ್ಳಿ : ಧಾರವಾಡ ಜಿಲ್ಲಾಡಳಿತ, ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ನಗರದ ವಿವಿಧ ಮಾಲ್ ಹಾಗೂ ಸೂಪರ್ ಮಾರ್ಕೆಟ್ಗಳಲ್ಲಿ ಶುಕ್ರವಾರದಂದು ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮತದಾನದ ಕುರಿತು ಸೆಲ್ಪೀ ಪಾಯಿಂಟ್ ಹಾಗೂ ಸ್ಟಾ್ಯಂಡ್ಡಗಳನ್ನು ವಿವಿಧ ಮಾಲ್ ಹಾಗೂ ಸೂಪರ್ ಮಾರ್ಕೆಟ್ನ ಕಾಂಪ್ಲೆಕ್ಸ್ಗಳಲ್ಲಿ ಅಳವಡಿಸಲಾಗಿದ್ದು, ಜನರು ಸೆಲ್ಪಿ ತೆಗೆದುಕೊಳ್ಳುತಿದ್ದಾರೆ ಪಾಲಿಕೆ ಆಯುಕ್ತ ಈಶ್ವರ ಉಳಾಗಡ್ಡಿ ಅವರು ತಿಳಿಸಿದ್ದಾರೆ.
ಮತದಾನದ ಕುರಿತು ಈ ಸೆಲ್ಪಿ ಪಾಯಿಂಟ್ಗಳ ಮೂಲಕ ವಿನೂತನವಾಗಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯ 82 ವಾರ್ಡ್ಗಳಲ್ಲಿ ಮತದಾನ ಪ್ರಚಾರಕ್ಕಾಗಿ ಟ್ಯಾಬ್ಲೊ ವಾಹನ ಸಂಚರಿಸಲಿದೆ, ಇದರ ಜತೆಗೆ ಎಲ್.ಇ.ಡಿ ವಾಹನ ಸಹ ಎಲ್ಲ ವಾರ್ಡ್ಗಳಲ್ಲಿ ಸಂಚರಿಸಲಿದೆ.
ಸ್ಮಾರ್ಟ್ ಸಿಟಿ ಯೋಜನೆಡಿಯ 36 ಡಿಜಿಟಲ್ ಡಿಸ್ಪ್ಲೇ ಬೋರ್ಡ್ಗಳಲ್ಲಿ ಮತದಾನ ಜಾಗೃತಿ ಕುರಿತು ವಿಡಿಯೋಗಳನ್ನು ಪ್ರಸಾರ ಮಾಡಲಾಗುತ್ತಿದೆ. 15 ಹೋಲ್ಡಿಂಗ್ಸ್ಗಳನ್ನು ಅಳವಡಿಸಲಾಗಿದೆ, ನಿತ್ಯ ಮನೆ, ಮನೆಗೆ ಹೋಗಿ ಕಸ ಹೊತ್ತೊಯ್ಯುವ ವಾಹನಗಳಲ್ಲಿ ಮತದಾನ ಜಾಗೃತಿ ಜಿಂಗಲ್ಸ್ಗಳನ್ನು ಅಳವಡಿಸಲಾಗಿದೆ ಎಂದು ಆಯುಕ್ತ ಈಶ್ವರ ಉಳಾಗಡ್ಡಿ ತಿಳಿಸಿದ್ದಾರೆ.