ಕೆರೆ ಅಂಗಳದಲ್ಲಿ ಮತದಾನ ಜಾಗೃತಿ

6 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾ ಸ್ವೀಪ ಸಮಿತಿ ವತಿಯಿಂದ ತಾಲೂಕಿನ ಮಾದನಬಾವಿ ಗ್ರಾಮದ ಹುಚ್ಚಪ್ಪಜ್ಜನ ಕೆರೆ ಅಂಗಳದಲ್ಲಿ ಶನಿವಾರ ಮತದಾನ ಜಾಗೃತಿ ಕಾರ್ಯಕ್ರಮ ನೆರವೇರಿಸಲಾಯಿತು.
ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಕೆಲಸಕ್ಕೆ ಆಗಮಿಸಿದ್ದ ಮಾದನಬಾವಿ ಗ್ರಾಮದ ಸುಮಾರು 200 ಜನ ಕೂಲಿ ಕಾಮಿರ್ಕರಿಗೆ ಮತದಾನದ ಮಹತ್ವ ತಿಳಿಸಲಾಯಿತು. ಜತೆಗೆ ತಮ್ಮ ಗ್ರಾಮದ ಜನರಿಗೂ ಮತದಾನದ ಮಹತ್ವ ತಿಳಿಸುವಂತೆ ಪ್ರೇರೇಪಿಸಲಾಯಿತು.
ಜಿಲ್ಲಾ ಸ್ವೀಪ್​ ನೋಡಲ್​ ಅಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ಮೇ 7ರಂದು ಎಲ್ಲರೂ ಮತಗಟ್ಟೆಗೆ ಬಂದು ತಪ್ಪದೇ ಮತದಾನ ಮಾಡಬೇಕು. ನೀವು ಮಾತ್ರವಲ್ಲದೆ ನಿಮ್ಮ ಗ್ರಾಮದ ಎಲ್ಲರೂ ಮತದಾನ ಮಾಡುವಂತೆ ಅವರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದರು.
ಜಿಪಂ ಉಪಕಾರ್ಯದಶಿರ್ ವಿಜಯಕುಮಾರ ಆಜೂರ ಮಾತನಾಡಿ, ನರೇಗಾ ಯೋಜನೆಯಡಿ ಹೆಣ್ಣು&ಗಂಡು ಎಂಬ ಭೇದ ಭಾವ ಇಲ್ಲ. ಎಲ್ಲರೂ ಸಮಾನರು ಮತ್ತು ಸಮಾನ ವೇತನ ನೀಡಲಾಗುತ್ತದೆ. ಅದರಂತೆ ಮತದಾನದಲ್ಲೂ ಪುರುಷ&ಮಹಿಳೆಯರಿಗೆ ಸಮಾನ ಹಕ್ಕಿದೆ. ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದರು.
ನಂತರದಲ್ಲಿ ನರೇಗಾ ಕೂಲಿ ಕಾಮಿರ್ಕರು ಮತದಾನ ಜಾಗೃತಿ ಮತ್ತು ನರೇಗಾ ಯೋಜನೆಯ ಪ್ಲೇ ಕಾರ್ಡ್​ ಹಿಡಿದು ಮತದಾನ ಜಾಗೃತಿ ಕುರಿತು ೂಷಣೆ ಕೂಗಿದರು. ತರಬೇತಿದಾರ ಕೆ.ಎಂ. ಶೇಖ ಮತದಾರ ಪ್ರತಿಜ್ಞಾವಿಧಿ ಬೋಧಿಸಿದರು. ನರೇಗಾ ಧಾರವಾಡ ತಾಲೂಕು ಸಹಾಯಕ ನಿರ್ದೇಶಕ ಚಂದ್ರು ಪೂಜಾರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net