ಸೈಕಲ್ ಜಾಥಾದಲ್ಲಿ ಮತದಾನ ಜಾಗೃತಿ

Voting Awareness in Cycle Jatha
ಬಾದಾಮಿಯಲ್ಲಿ ಲೋಕಸಭೆ ಚುನಾವಣೆ ಅಂಗವಾಗಿ ಸೈಕಲ್ ಜಾಗೃತಿ ಜಾಥಾಕ್ಕೆ ಸಹಾಯಕ ಚುನಾವಣಾಧಿಕಾರಿ ಡಾ. ದುರ್ಗೇಶ ಎಸ್.ಜಿ. ಮತ್ತು ತಹಸೀಲ್ದಾರ್ ಜೆ.ಬಿ. ಮಜ್ಜಗಿ ಜಂಟಿಯಾಗಿ ಚಾಲನೆ ನೀಡಿದರು. ತಾಪಂ ಇಒ ಬಿರೇಂದ್ರ ಸಿಂಗ್, ಬಿಇಒ ಎನ್.ವೈ. ಕುಂದರಗಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ. ದೊಡ್ಡಪ್ಪನ್ನವರ, ಕೃಷಿ ಸಹಾಯಕ ನಿರ್ದೇಶಕ ಅಶೋಕ ತಿರಕನ್ನವರ, ಪಿಎಸ್‌ಐ ವಿಠ್ಠಲ ನಾಯಕ ಇತರರಿದ್ದರು.
Published on

ಬಾದಾಮಿ: ಪಟ್ಟಣದಲ್ಲಿ ಲೋಕಸಭೆ ಚುನಾವಣೆ ಅಂಗವಾಗಿ ಸೈಕಲ್ ಜಾಗೃತಿ ಜಾಥಾಕ್ಕೆ ಸೋಮವಾರ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಸಹಾಯಕ ಚುನಾವಣಾಧಿಕಾರಿ ಡಾ. ದುರ್ಗೇಶ ಎಸ್.ಜಿ. ಮತ್ತು ತಹಸೀಲ್ದಾರ್ ಜೆ.ಬಿ.ಮಜ್ಜಗಿ ಜಂಟಿಯಾಗಿ ಚಾಲನೆ ನೀಡಿದರು.

ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿ, ತಾಲೂಕು ಆಡಳಿತ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಪ್ಪದೆ ಮತದಾನ ಮಾಡಿ, ಮತದಾನ ಪವಿತ್ರ ಹಕ್ಕು ಎಂದು ಘೋಷಣೆ ಕೂಗಲಾಯಿತು. ಹಲವು ಭಿತ್ತಿಚಿತ್ರ, ಪೋಸ್ಟರ್, ಸ್ಟಿಕರ್ ಮೂಲಕ ಜಾಗೃತಿ ಮೂಡಿಸಲಾಯಿತು.

ತಾಪಂ ಇಒ ಬಿರೇಂದ್ರ ಸಿಂಗ್, ಬಿಇಒ ಎನ್.ವೈ. ಕುಂದರಗಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ. ದೊಡ್ಡಪ್ಪನ್ನವರ, ಕೃಷಿ ಸಹಾಯಕ ನಿರ್ದೇಶಕ ಅಶೋಕ ತಿರಕನ್ನವರ, ಪಿಎಸ್‌ಐ ವಿಠ್ಠಲ ನಾಯಕ, ಪುರಸಭೆ ಮುಖ್ಯಾಧಿಕಾರಿ ಡಿ. ಸುಧಾಕರ, ದೈನಿಕ ಶಿಕ್ಷಣ ಪರಿವೀಕ್ಷಕ ಬಿ.ಎಚ್. ಹಳಗೇರಿ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀಕಾಂತ ಸಬನೀಸ್, ಶಿಕ್ಷಣ ಸಂಯೋಜಕ ವಿ.ಎಸ್. ಹಿರೇಮಠ, ಎಂ.ಸಿ.ನಾಲತವಾಡ, ಮುಖ್ಯಶಿಕ್ಷಕ ಬಿ.ಎಸ್. ಕರಡಿ, ಸಮೂಹ ಸಂಪನ್ಮೂಲ ವ್ಯಕ್ತಿ ಶಿವಪ್ರಕಾಶ ಇಟಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net