

ಧಾರವಾಡ: ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಕಾಲೇಜು ಶಿಕ್ಷಣ ವಿಭಾಗ, ವ್ಯೆದ್ಯಕೀಯ ಶಿಕ್ಷಣ, ತಾಂತ್ರಿಕ ಶಿಕ್ಷಣ ಹಾಗೂ ನರ್ಸಿಂಗ್ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಮತದಾನ ಅರಿವು ಕಾರ್ಯಾಗಾರವನ್ನು ಸೋಮವಾರ ಏರ್ಪಡಿಸಲಾಗಿತ್ತು.
ಜಿ.ಪಂ. ಸಿಇಒ ಹಾಗೂ ಸ್ವೀಪ್ ನೋಡಲ್ ಅಽಕಾರಿ ಟಿ.ಕೆ. ಸ್ವರೂಪ ಅವರು ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ, ವಿಎಚ್‌ಎ ಮೊಬೈಲ್ ಆ್ಯಪ್ ಹಾಗೂ ಇಎಲ್‌ಸಿಗಳ ಮುಖಾಂತರ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಕೈಗೊಳ್ಳುವ ಕಾರ್ಯ ಚಟುವಟಿಕೆ ಕುರಿತು ತಿಳಿವಳಿಕೆ ನೀಡಿದರು.
ಶಿಬಿರಾರ್ಥಿಗಳಿಗೆ ಮತದಾನದ ಪ್ರತಿಜ್ಞಾವಿಽ ಬೋಽಸಲಾಯಿತು. ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನ, ಸಂಪನ್ಮೂಲ ವ್ಯಕ್ತಿಗಳಾದ ಕೆ.ಎಂ. ಶೇಖ್, ವಿಜಯಕುಮಾರ ಮಾನೆ, ವೈ.ಎಚ್. ಭಜಂತ್ರಿ ಹಾಗೂ ಭರತ ಚಂದನಕುಮಾರ ಭಾಗವಹಿಸಿದ್ದರು.