

ಇಂಡಿ: ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು. ಮತದಾನ ಮಾಡಲು ನಮ್ಮ ಸುತ್ತಲಿನವರಿಗೆ ತಿಳಿವಳಿಕೆ ನೀಡಬೇಕು ಎಂದು ಹಿರೇರೂಗಿ ಗ್ರಾಪಂ ಪಿಡಿಒ ಬಸವರಾಜ ಬಬಲಾದ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ, ಗ್ರಾಪಂ ಮತ್ತು ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ನಮ್ಮ ನಡೆ-ಮತಗಟ್ಟೆ ಕಡೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತವನ್ನು ಚುನಾವಣೆಯ ತಳಹದಿಯ ಮೇಲೆ ಕಟ್ಟಲಾಗಿದೆ. ಮತದಾನದ ಹಕ್ಕು ಕೇವಲ ಸವಲತ್ತು ಅಲ್ಲ. ಅದೊಂದು ಮೂಲಭೂತ ಮಾನವ ಹಕ್ಕಾಗಿದೆ. ಎಲ್ಲರಲ್ಲಿ ಮತದಾನದ ಜಾಗೃತಿ ಹೆಚ್ಚಿಸಬೇಕಾಗಿದೆ ಎಂದರು.
ನಮ್ಮ ನಡೆ-ಮತಗಟ್ಟೆ ಕಡೆ, ನಮ್ಮ ಮತ-ನಮ್ಮ ಹಕ್ಕು, ಜನ ಪ್ರತಿನಿಧಿ ಆರಿಸಿ, ಸಾಮಾಜಿಕ ಕಳಕಳಿ ನಿರ್ವಹಿಸಿ ಎನ್ನುವ ಅನೇಕ ಫಲಕಗಳನ್ನು ಹಿಡಿದು ಜಾಥಾ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಗ್ರಾಮಲೆಕ್ಕಾಧಿಕಾರಿ ಶ್ರೀಶೈಲ ಹಂಚಿನಾಳ, ಮುಖ್ಯಶಿಕ್ಷಕ ಅನಿಲ ಪತಂಗಿ, ಸುರೇಶ ಅಂಕಲಗಿ, ಎ.ಎಂ. ಬೆದ್ರೇಕರ, ಎಸ್.ಎಸ್. ಅರಬ, ಎಸ್.ಎಂ. ಪಂಚಮುಖಿ, ಎಸ್.ಆರ್. ಚಾಳೇಕಾರ,.ಎಸ್.ಎಚ್. ಮೈದರಗಿ, ಎನ್.ಬಿ. ಚೌಧರಿ, ಎಸ್.ಡಿ. ಬಿರಾದಾರ, ವಿ.ವೈ. ಪತ್ತಾರ, ಜೆ.ಸಿ. ಗುಣಕಿ, ಎಸ್.ಎನ್. ಡಂಗಿ, ಜೆ.ಎಂ. ಪತಂಗಿ, ಎಂ.ಎಂ. ಪತ್ತಾರ, ಸುರೇಶ ದೊಡ್ಯಾಳಕರ ಹಾಗೂ ಪಂಚಾಯಿತಿ ಸಿಬ್ಬಂದಿ ಅಕ್ಬರ ಕೊರಬು, ಶ್ರೀಧರ ಬಾಳಿ, ಶರಣು ನಾಟೀಕಾರ, ಬಸವರಾಜ ತಳಕೇರಿ, ಸಚಿನ ಹೊಸೂರ ಇತರರಿದ್ದರು.