ಎನ್​ಎಸ್​ಎಸ್​ ಶಿಬಿರಾರ್ಥಿಗಳಿಂದ ಮತದಾನ ಜಾಗೃತಿ

Voting aawareness by NSS campers
ವಿಜಯಪುರ ನಗರದ ಹೊರವಲಯದ ಹಿಟ್ನಳ್ಳಿ ಗ್ರಾಮದಲ್ಲಿ ದಿ ಪ್ರೆಸೆಡೆನ್ಸಿ ಶಿಕ್ಷಣ ಮಹಾವಿದ್ಯಾಲಯದ ಎನ್​ಎಸ್​ಎಸ್​ ಶಿಬಿರಾರ್ಥಿಗಳಿಂದ ಮತದಾನ ಮಹತ್ವದ ಕುರಿತು ಜಾಗೃತಿ ಜಾಥಾ ನಡೆಯಿತು. ಡಾ. ಪ್ರಕಾಶ್​ ರಾಠೋಡ, ರಾಜು ಪವಾರ, ಡಾ. ಎಸ್​.ಟಿ. ಬೋಳರೆಡ್ಡಿ ಮತ್ತಿತರರಿದ್ದಾರೆ.
Published on

ವಿಜಯಪುರ: ತಾಲೂಕಿನ ಹಿಟ್ನಳ್ಳಿ ಗ್ರಾಮದಲ್ಲಿ ದಿ ಪ್ರೆಸೆಡೆನ್ಸಿ ಶಿಕ್ಷಣ ಮಹಾವಿದ್ಯಾಲಯದ ಎನ್​ಎಸ್​ಎಸ್​ ಶಿಬಿರಾರ್ಥಿಗಳಿಂದ ಈಚೆಗೆ ಮತದಾನ ಮಹತ್ವದ ಕುರಿತು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ಸಂಯೋಜನ ಅಧಿಕಾರಿ ಡಾ. ಪ್ರಕಾಶ್​ ರಾಠೋಡ ಮತ್ತು ಜಿಲ್ಲಾ ಚುನಾವಣಾ ರಾಯಭಾರಿ ರಾಜು ಪವಾರ ಜಾಥಾಗೆ ಚಾಲನೆ ನೀಡಿದರು.


ಗ್ರಾಮದ ಮಾರುತೇಶ್ವರ ದೇವಸ್ಥಾನ ಬಳಿ ನೂರಕ್ಕೂ ಹೆಚ್ಚು ಎನ್​ಎಸ್​ಎಸ್​ ಶಿಬಿರಾರ್ಥಿಗಳು ಮತದಾನ ಜಾಗೃತಿ ಮೂಡಿಸುವ ಜತೆಗೆ ಪಂಚಾಯತಿ ಮತಗಟ್ಟೆ ಸಂಖ್ಯೆ 284 ರಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

ನಂತರ ವಿದ್ಯಾರ್ಥಿನಿಯರು ಮತದಾನ ಜಾಗೃತಿ ಮೂಡಿಸುವ ರಂಗೋಲಿ ಬಿಡಿಸಿದರು. ಪ್ರಾಚಾರ್ಯ ಡಾ. ಎಸ್​.ಟಿ. ಬೋಳರೆಡ್ಡಿ ಮತದಾನ ಜಾಗೃತಿ ಮೂಡಿಸುವ ಘೋಷಣೆ ಕೂಗಿದರು.

ಗ್ರಾಪಂ ಕಾರ್ಯದರ್ಶಿ ಡಿ.ಎಸ್​. ತಳವಾರ, ಸಮುದಾಯ ಆರೋಗಾಧಿಕಾರಿ ಸಂತೋಷ ನಡುವಿನಮನಿ, ಪಿ.ಆರ್​. ಡೋಣೂರ, ಕಾಜಾಅಮೀನ ವಾಲಿಕಾರ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net