

ಬಾದಾಮಿ: ಪ್ರಜಾಪ್ರಭುತ್ವದಲ್ಲಿ ಮತದಾನ ಪವಿತ್ರವಾದ ಹಕ್ಕು. ಎಲ್ಲರೂ ತಮ್ಮ ಹಕ್ಕು ಚಲಾಯಿಸುವ ಮೂಲಕ ಉತ್ತಮ ಜನಪ್ರತಿನಿಧಿ ಆಯ್ಕೆ ಮಾಡಬೇಕೆಂದು ತಹಸೀಲ್ದಾರ್ ಜೆ.ಬಿ. ಮಜ್ಜಗಿ ಹೇಳಿದರು.
ನಗರದ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ತಾಲೂಕು ಆಡಳಿತ, ತಾಪಂ, ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಭಾನುವಾರ ಬಿಸಿಯೂಟ ಸಿಬ್ಬಂದಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೇ 7 ರಂದು ಬಾಗಲಕೋಟೆ ಲೋಕಸಭೆ ಮತಕ್ಷೇತ್ರದ ಮತದಾನ ನಡೆಯಲಿದ್ದು, ನೀವು ನಿಮ್ಮ ಸುತ್ತಮುತ್ತಲಿನ ಜನರಿಗೆ ಮತದಾನದ ಮಹತ್ವ ತಿಳಿವಳಿಕೆ ನೀಡಿ 100ಕ್ಕೆ 100ರಷ್ಟು ಮತದಾನ ಮಾಡಲು ಪ್ರಯತ್ನಿಸಬೇಕೆಂದು ಮನವಿ ಮಾಡಿದರು. ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಎಂ.ಬಿ. ದೊಡ್ಡಪ್ಪನ್ನವರ, ಬಿಇಒ ಕಚೇರಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಎಚ್. ಹಳಗೇರಿ ಸೇರಿ ಬಿಸಿಯೂಟ ಸಿಬ್ಬಂದಿ ಹಾಜರಿದ್ದರು.
ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ಪಿಕಾರ್ಡ್ ಬ್ಯಾಂಕ್‌ನಿಂದ ಆರಂಭವಾಗಿ ನಗರದ ಪ್ರಮುಖ ರಸ್ತೆಗಳ ಮೂಲಕ ರಾಮದುರ್ಗ ವೃತ್ತ, ಅಂಬೇಡ್ಕರ ವೃತ್ತ ಮೂಲಕ ಮರಳಿ ಪಿಕಾರ್ಡ್ ಬ್ಯಾಂಕ್ ಆವರಣಕ್ಕೆ ಬಂದು ತಲುಪಿತು.