ಮತದಾನ ಜಾಗೃತಿಗಾಗಿ ಬೈಕ್ ರ‌್ಯಾಲಿ

27Imam5-Web
ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಬೈಕ್ ರ‌್ಯಾಲಿಗೆ ಪರಶುರಾಮ ದುಡಗುಂಟಿ ಚಾಲನೆ ನೀಡಿದರು. ಡಾ.ಎ.ಬಿ.ಪುಂಡಲೀಕ, ರವಿ ಭಜಂತ್ರಿ, ರಾಘವೇಂದ್ರ ಅಣ್ವೇಕರ್, ಪಿ.ಪಿ.ದೇಶಪಾಂಡೆ ಇತರರು ಇದ್ದರು.
Published on

ಬೆಳಗಾವಿ: ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸ್ವೀಪ್ ಕಾರ್ಯಕ್ರಮದಡಿ ಶನಿವಾರ ಮತದಾನ ಜಾಗೃತಿಗಾಗಿ ಬೈಕ್ ರ‌್ಯಾಲಿ ಹಮ್ಮಿಕೊಂಡಿತ್ತು. ವಿಶ್ವೇಶ್ವರಯ್ಯ ನಗರದಲ್ಲಿ ಜಿಪಂ ಮುಖ್ಯಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ರ‌್ಯಾಲಿಗೆ ಚಾಲನೆ ನೀಡಿದರು. ಅಲ್ಲಿಂದ ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಎಸ್ಪಿ ಕಚೇರಿ, ಧರ್ಮನಾಥ ಭವನ, ಶ್ರೀನಗರ, ವಂಟಮೂರಿ ಕಾಲನಿ, ರಾಮತೀರ್ಥ ನಗರ ಮಾರ್ಗವಾಗಿ ಸಂಚರಿಸಿ ಕಣಬರ್ಗಿಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ತಲುಪಿತು. ಡಿಡಿಪಿಐ ಡಾ. ಎ.ಬಿ.ಪುಂಡಲೀಕ, ಬಿಇಒ ರವಿ ಭಜಂತ್ರಿ, ಜಿಲ್ಲಾ ಸ್ವೀಪ್ ಐಕಾನ್ ರಾಘವೇಂದ್ರ ಅಣ್ವೇಕರ್, ಪಿ.ಪಿ. ದೇಶಪಾಂಡೆ, ಎ.ಪಿ. ಬಸನಾಳ, ಐ.ಡಿ. ಹಿರೇಮಠ, ರಾಜಶೇಖರ ಚಳಗೇರಿ ಇತರರಿ ದ್ದರು. 100ಕ್ಕೂ ಅಧಿಕ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net