ಪ್ರತಿಯೊಬ್ಬರೂ ಕಡ್ಡಾಯ ಮತದಾನ ಮಾಡಿ

Medpalli
ಔರಾದ್ ತಾಲೂಕಿನ ಮೇಡಪಳ್ಳಿಯಲ್ಲಿ ನರೇಗಾ ಕಾರ್ಮಿಕರಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು. ತಾಪಂ ಎಡಿ ಸುದೇಶ ಕೊಡ್ದೆ, ಪಿಡಿಒ ಸಂತೋಷ ಪಾಟೀಲ್, ಆನಂದ ಇತರರಿದ್ದರು.
Published on

ಔರಾದ್: ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಬೇಕು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸುದೇಶ ಕೊಡ್ಡೆ ಕೋರಿದರು.

ಮೇಡಪಳ್ಳಿ ಗ್ರಾಮದಲ್ಲಿ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಶುಕ್ರವಾರ ತೆರಳಿ ನರೇಗಾ ಕೂಲಿ ಕಾರ್ಮಿಕರಲ್ಲಿ ಮತದಾನ ಜಾಗೃತಿ ಮೂಡಿಸಿದ ಅವರು, ಯಾವ ಕಾರಣಕ್ಕೂ ಮತದಾನದ ಹಕ್ಕಿನಿಂದ ದೂರವಿರಬಾರದು. ಈಗಾಗಲೆ ನಿಮ್ಮ ಹೆಸರು ಮತಪಟ್ಟಿಯಲ್ಲಿ ಇರುವುದನ್ನು ಖಾತ್ರಿ ಮಾಡಿಕೊಳ್ಳಬೇಕು ಎಂದರು.

ಮತದಾನ ಪ್ರಮಾಣ ಹೆಚ್ಚಿಸಲು ತಾಲೂಕು ಸ್ವೀಪ್ ಸಮಿತಿಯಿಂದ ನಾನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ೧೮ ವರ್ಷ ತುಂಬಿದವರು ಕಡ್ಡಾಯ ಮತದಾನ ಮಾಡುವಂತೆ ನೋಡಿಕೊಳ್ಳಬೇಕು. ಸಹಾಯ ಬೇಕಿದ್ದರೆ ೮೨೭೭೫ ೦೬೦೦೦ಗೆ ಕರೆ ಮಾಡಿ ಎಂದು ಹೇಳಿದರು.

ಪಿಡಿಒ ಸಂತೋಷ ಪಾಟೀಲ್ ಮಾತನಾಡಿ, ಮೇ ೭ರಂದು ಎಲ್ಲ ಕೂಲಿ ಕಾರ್ಮಿಕರು ಕಡ್ಡಾಯವಾಗಿ ಮತದಾನ ಕೇಂದ್ರಕ್ಕೆ ತೆರಳಿ ತಮ್ಮ ಅಮೂಲ್ಯವಾದ ಮತದ ಹಕ್ಕು ಚಲಾಯಿಸಬೇಕು. ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿಯೊಬ್ಬರ ಮತ ಅಮೂಲ್ಯವಾಗಿದೆ ಎಂದರು.

ತಾಪA ಸಂಯೋಜಕ ಆನಂದ, ಸುದರ್ಶನ್, ಕಂಠಯ್ಯ ಸ್ವಾಮಿ ಇತರರಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಮತದಾನವಾದ ನಾಗಮಾರಪಳ್ಳಿ, ಬೊಂತಿ, ಹೊಕ್ರಾಣಗಳಲ್ಲೂ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net