

ಜಯಪುರ: ಮೇಗುಂದಾ ಹೋಬಳಿಯಾದ್ಯಂತ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು.
ಹೋಬಳಿಯ 6 ಗ್ರಾಪಂಗಳ 41 ಮತಟ್ಟೆಗಳಲ್ಲಿ ಮತದಾನ ನಡೆಯಿತು. ವೃದ್ಧರು, ಮಹಿಳೆಯರು ಹಾಗೂ ಹೊಸ ಮತದಾರರು ಹಕ್ಕು ಚಲಾಯಿಸಿದರು. ಹೇರೂರು ಗ್ರಾಪಂ 9 ಮತಗಟ್ಟೆಗಳಲ್ಲಿ, ಅತ್ತಿಕುಡಿಗೆ ಗ್ರಾಪಂ, ಗುಡ್ಡೇತೋಟ ಗ್ರಾಪಂ, ಜಯಪುರ ಗ್ರಾಪಂ, ಹಿರೇಗದ್ದೆ ಗ್ರಾಪಂ ತಲಾ 6 ಮತಗಟ್ಟೆಗಳಲ್ಲಿ, ಅಗಳಗಂಡಿ ಗ್ರಾಪಂ 8 ಮತಗಟ್ಟೆಗಳಲ್ಲಿ ಮತದಾನ ಮಾಡಲಾಯಿತು. ಬಹುತೇಕ ಮತಗಟ್ಟೆಗಳಲ್ಲಿ ಕುಡಿಯಲು ಪಾನೀಯ, ಊಟ, ಮತದಾರರು ಮತಗಟ್ಟೆಗೆ ಬರಲು ವಾಹನಗಳ ವ್ಯವಸ್ಥೆಯನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮಾಡಿದ್ದು, ಮತದಾರರನ್ನು ಸೆಳೆಯಲು ಪೈಪೋಟಿ ನಡೆಸುತ್ತಿದ್ದದ್ದು ಸಾಮಾನ್ಯವಾಗಿತ್ತು.