ರಾಜಕೀಯ ಚುನಾವಣೆಗೆ ಸೀಮಿತ

mtb
voting
Published on

ಬೆಂಗಳೂರು ಗ್ರಾಮಾಂತರ: ಚುನಾವಣೆ ಸಮಯದಲ್ಲಿ ರಾಜಕೀಯ ಮಾಡಬೇಕು, ಚುನಾವಣೆ ಬಳಿಕ ಯಾವುದೇ ಸರ್ಕಾರ ಬರಲಿ ಜನರ ತೀರ್ಪನ್ನು ಸ್ವಾಗತಿಸಬೇಕು. ಹಾಗೆಯೇ, ಎಲ್ಲರೂ ಒಂದಾಗಿ ಜೀವನ ನಡೆಸಬೇಕು ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಗರುಡಾಚಾರ್‌ಪಾಳ್ಯದಲ್ಲಿ ಮತದಾನ ಮಾಡಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮನಸ್ಥಾಪ, ಕಿರಿಕಿರಿ ವೈಷಮ್ಯ ಸಾಮಾನ್ಯ. ಆದರೆ ಚುನಾವಣೆ ಬಳಿಕ ಎಲ್ಲವನ್ನೂ ಮರೆತು ಸಹಬಾಳ್ವೆಯಿಂದ ಜೀವನ ನಡೆಸಬೇಕು. ಹಾಗೆಯೇ ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಇದನ್ನು ಎಲ್ಲರೂ ಸಂಭ್ರಮದಿಂದ ಆಚರಿಸಬೇಕು. ಯಾರೊಬ್ಬರೂ ಮತದಾನದಿಂದ ವಂಚಿತರಾಗಬಾರದು ಎಂದರು.
ಕೆಲವೊಂದು ಪ್ರಕರಣ ಹೊರತುಪಡಿಸಿ ಎಲ್ಲ ಕಡೆಯಲ್ಲೂ ಶಾಂತಿಯುತವಾಗಿ, ಪಾರದರ್ಶಕವಾಗಿ ಮತದಾನ ನಡೆದಿದೆ. ಇದಕ್ಕೆ ಚುನಾವಣಾ ಸಿಬ್ಬಂದಿ ಶ್ರಮ ಅಪಾರವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಸಾಕಷ್ಟು ಶ್ರಮಿಸಿದ್ದಾರೆ. ಜಿಲ್ಲಾಡಳಿತ ಮತದಾನ ಕೇಂದ್ರಗಳಲ್ಲಿ ಅಗತ್ಯ ಸೌಕರ್ಯ ಕಲ್ಪಿಸುವ ಮೂಲಕ ಅಚ್ಚುಕಟ್ಟಾಗಿ ಚುನಾವಣಾ ಪ್ರಕ್ರಿಯೆ ನಿರ್ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net