

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಗೆ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಹೊಸಕೋಟೆಯಲ್ಲಿ ಗರಿಷ್ಠ(ಶೇ.86.45), ಯಲಹಂಕದಲ್ಲಿ ಕನಿಷ್ಠ(ಶೇ.60.98) ಮತದಾನವಾಗಿದೆ.
ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 19,81,347 ಪೈಕಿ 15,25,199 ಮತದಾರರು ಮತಹಕ್ಕು ಚಲಾಯಿಸಿದ್ದು ಶೇ.76.98 ರಷ್ಟು ಸಾಧನೆಯಾಗಿದೆ.
ಇಲ್ಲಿ 9,83,775 ಪುರುಷ, 9,97,306 ಮಹಿಳೆ ಮತ್ತು 266 ಇತರೆ ಸೇರಿ 19,81,347 ಮತದಾರರಿದ್ದಾರೆ. ಈ ಪೈಕಿ 7,66,151 ಪುರುಷ, 7,58,952 ಮಹಿಳೆ ಮತ್ತು 96 ಇತರೆ ಸೇರಿ 15,25,199 ಮತದಾರರು ಮತದಾನ ಮಾಡಿದ್ದಾರೆ.
ಇದರ ನಡುವೆ ಕಳೆದ ಲೋಕಸಭಾ ಚುನಾವಣೆಗಳ ಮಾದರಿಯಲ್ಲಿ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಚಲಾವಣೆಯಾಗಿದ್ದು ಚಿಕ್ಕಬಳ್ಳಾಪುರ (ಶೇ.85.32) ದ್ವಿತೀಯ, ದೇವನಹಳ್ಳಿ (ಶೇ.82.98) ತೃತೀಯ, ಬಾಗೇಪಲ್ಲಿ (ಶೇ.79.70) ನಾಲ್ಕನೇ ಸ್ಥಾನವನ್ನು ಹೊಂದಿದೆ.
*ಕಳೆದ 2019 ರಲ್ಲಿ ಸಾಧನೆ
ಕಳೆದ 2019 ರ ಲೋಕಸಭೆ ಕ್ಷೇತ್ರ ಚುನಾವಣೆಯಲ್ಲಿ 18,08,359 ಪೈಕಿ 13,88,474 ಮತದಾರರು ಮತ ಹಕ್ಕು ಚಲಾಯಿಸಿದ್ದು ಕ್ಷೇತ್ರದಾದ್ಯಂತ ಶೇ.76.76 ಮತದಾನವಾಗಿತ್ತು.
ಕ್ಷೇತ್ರದಲ್ಲಿನ 8 ವಿಧಾನಸಭೆ ಕ್ಷೇತ್ರಗಳ ಪೈಕಿ ಹೊಸಕೋಟೆಯಲ್ಲಿ ಗರಿಷ್ಠ(ಶೇ.88), ಯಲಹಂಕದಲ್ಲಿ ಕನಿಷ್ಠ(ಶೇ.61.74) ಮತದಾನವಾಗಿತ್ತು. ತದನಂತರ ಮತದಾನದಲ್ಲಿ ದೇವನಹಳ್ಳಿ (ಶೇ.84.04) ದ್ವಿತೀಯ, ಚಿಕ್ಕಬಳ್ಳಾಪುರ(ಶೇ.82.23) ತೃತೀಯ, ದೊಡ್ಡಬಳ್ಳಾಪುರ(ಶೇ.81) ನಾಲ್ಕನೇ, ಗೌರಿಬಿದನೂರು(ಶೇ.78.42) ಐದನೇ, ನೆಲಮಂಗಲ(ಶೇ.76.44) ಆರು, ಬಾಗೇಪಲ್ಲಿ(ಶೇ.75.72) ಏಳನೇ ಸ್ಥಾನದಲ್ಲಿತ್ತು.