ಸಮಾನ ಮನಸ್ಕರ ತಂಡಕ್ಕೆ ಮತದಾರರು ಬೆಂಬಲ ನೀಡಿ

b.s. Ramanath
Published on

ಮಡಿಕೇರಿ: ಭಾಗಮಂಡಲ ಜೇನು ಸೊಸೈಟಿಯ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಸೆ.೧೦ರಂದು ನಡೆಯಲಿದ್ದು, ಸಮಾನ ಮನಸ್ಕರ ತಂಡಕ್ಕೆ ಮತದಾರರು ಬೆಂಬಲ ನೀಡಬೇಕೆಂದು ಕೆಪಿಸಿಸಿ ಸದಸ್ಯ ಬೇಕಲ್ ರಮಾನಾಥ್ ಮನವಿ ಮಾಡಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಗಮಂಡಲ ಜೇನು ಸೊಸೈಟಿಯ ಹಾಲಿ ಆಡಳಿತ ಮಂಡಳಿಯಿಂದ ಭ್ರಷ್ಟಾಚಾರ ನಡೆಯುತ್ತಿದೆ. ಭವಿಷ್ಯದ ಯೋಜನೆಗಳಿಲ್ಲದೆ ಜೇನು ಕೃಷಿಕರಿಗೆ ಅನ್ಯಾಯವಾಗುತ್ತಿದೆ. ಈ ಬಾರಿ ಜನರೇ ಬದಲಾವಣೆ ಬಯಸಿದ್ದು, ಕಾಂಗ್ರೆಸ್ ಬೆಂಬಲಿತ ಸಮಾನ ಮನಸ್ಕರ ತಂಡಕ್ಕೆ ಮತ ನೀಡಲಿದ್ದಾರೆ ಎಂದು ರಮನಾಥ್ ವಿಶ್ವಾಸ ವ್ಯಕ್ತಪಡಿಸಿದರು.


ಸುದ್ದಿಗೋಷ್ಠಿಯಲ್ಲಿ ಜೇನು ಸೊಸೈಟಿ ಚುನಾವಣಾ ಸಮಿತಿ ಸಂಚಾಲಕ ವೆಂಕಟೇಶ್, ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಅಧ್ಯಕ್ಷ ತೆನ್ನೀರ ಮೈನಾ, ಡಿಸಿಸಿ ಸದಸ್ಯ ಅಬ್ದುಲ್ ಲತೀಫ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net