ಮೋದಿ ಗೆಲ್ಲಿಸಲು ಮತದಾರರ ತೀರ್ಮಾನ

h29-mr patil
Published on

ಹುಬ್ಬಳ್ಳಿ: ದೇಶಕ್ಕೆ ದಕ್ಷ, ಪ್ರಾಮಾಣಿಕ ಪ್ರಧಾನಿ ಆಗಬೇಕೆಂದು ಜನರು ಬಯಸಿದ್ದಾರೆ. ಹಾಗಾಗಿಯೇ ಮತದಾರರು ನರೇಂದ್ರ ಮೋದಿ ಅವರನ್ನು ಗೆಲ್ಲಿಸಲು ತೀರ್ಮಾನಿಸಿದ್ದಾರೆ ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.
ಕುಂದಗೋಳ ತಾಲೂಕಿನ ಚಿಕ್ಕನರ್ತಿ ಗ್ರಾಮದ ಬಿಜೆಪಿ ತಾಲೂಕು ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಲಾಲಸಾಬ್ ನದಾಫ್(ಅಪ್ಪಣ್ಣ) ಅವರ ಮನೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪರವಾಗಿ ಸೋಮವಾರ ಮತದಾರರ ಸಭೆ ನಡೆಸಿ ಅವರು ಮಾತನಾಡಿದರು.
ಬರ ಪರಿಹಾರ ನಿಧಿಯನ್ನು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ನಿಗದಿ ಪಡಿಸಿದಂತೆ ಘೋಷಣೆ ಮಾಡಿದೆ. ಕೋರ್ಟ್ ಆದೇಶ ನೀಡಿದ ಮೇಲೆ ಪರಿಹಾರ ಘೋಷಣೆ ಮಾಡಿದ್ದಾರೆ ಎನ್ನುವ ಕಾಂಗ್ರೆಸ್ ಅಪವಾದ ಸುಳ್ಳು ಎನ್ನುವುದು ಸಹ ಜನರಿಗೆ ಅರ್ಥವಾಗಿದೆ. ಪರಿಹಾರ ನಿಧಿ ಯಾವ ಸಮಯದಲ್ಲಿ ನೀಡಬೇಕು ಎನ್ನುವ ಮಾನದಂಡಗಳಿರುತ್ತವೆ. ಅದರಂತೆ ಕೇಂದ್ರ ರಾಜ್ಯಕ್ಕೆ ಮಂಜೂರು ಮಾಡಿದೆ. ಬರ ಪರಿಹಾರ ಕಡಿಮೆಯಾಗಿದೆ ಎನ್ನುವ ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ ಎಂದರು.
ಹಿರಿಯ ವಕೀಲ ಜಿ.ಬಿ. ಸೊರಟೂರ ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಎನ್.ಎನ್. ಪಾಟೀಲ, ಪ್ರಮುಖರಾದ ಜಿ.ಟಿ. ಬಾಲನ್ನವರ, ಡಿ.ವೈ. ಲಕ್ಕನಗೌಡ್ರ, ರವಿಗೌಡ ಪಾಟೀಲ, ಬಸವರಾಜ ರೋಢಗಿ, ಫಕ್ಕಜ್ಜಾ ಕೋರಿ, ಭರಮಗೌಡ ದ್ಯಾವನಗೌಡ್ರ, ಮಂಜುನಾಥ ಬೂದಿಹಾಳ, ದಾನ್ನಪ್ಪ ಗಂಗಾಯಿ, ಹನುಮಂತಪ್ಪ ರೊಟ್ಟಿಗವಾಡ, ಸಹದೇವಪ್ಪ ಬಿಳೇಬಾಳ, ಅಂದಪ್ಪ ಶಾನವಾಡ, ನಿಂಗಪ್ಪ ಇಟಗಿ, ಚನ್ನಪ್ಪ ಸ್ವಾದಿ, ಕಲ್ಮೇಶ ಬೆಳವಟಗಿ, ಸಂಜೀವ ಸೋಮರೆಡ್ಡಿ, ಗುರುಪಾದ ಸ್ವಾದಿ, ಬಸವರಾಜ ಅರಳಿಕಟ್ಟಿ ಇತರರು ಉಪಸ್ಥಿತರಿದ್ದರು. ಅಪ್ಪಣ್ಣ ನದಾಫ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net