ದೇಶ, ವಿದೇಶದಿಂದ ಬಂದು ಮತ ಚಲಾವಣೆ

voting shimogga
ಅಮೆರಿಕಾದಿಂದ ಬಂದಿದ್ದ ಊರುಗಡೂರಿನ ಚಿದಂಬರ್ ಅವರ ಪುತ್ರ ಮನೋಜ್ ಮತ್ತು ಸೊಸೆ ಅಶ್ವಿನಿ ಮತದಾನ ಮಾಡಿದರು.
Published on

ಶಿವಮೊಗ್ಗ: ಲೋಕಸಭೆ ಚುನಾವಣೆಗೆ ಬಹಳಷ್ಟು ಮಂದಿ ದೇಶ-ವಿದೇಶಗಳಿಂದಲೂ ಬಂದು ಮತದಾನ ಮಾಡಿದ್ದು ವಿಶೇಷವಾಗಿತ್ತು.

ಮತದಾನ ಮೇ 7ಕ್ಕೆ ನಿಗದಿಯಾಗಿತ್ತು. ಹಾಗಾಗಿ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಆಸ್ಟ್ರೇಲಿಯಾ, ಅಮೇರಿಕಾ ಸೇರಿದಂತೆ ಹಲವು ದೇಶಗಳಿಂದ ತಾಯ್ನಡಿಗೆ ಬಂದು ತಮ್ಮ ಮತ ಹಕ್ಕು ಚಲಾಯಿಸಿದರು.
ಮತ್ತೆ ಕೆಲವರು ದೇಶದ ವಿವಿಧ ರಾಜ್ಯಗಳಿಂದ ಬಂದು ಮತ ಚಲಾಯಿಸಿದರು. ಎಂದಿನಂತೆ ಬೆಂಗಳೂರು, ಮೈಸೂರು ಸೇರಿ ರಾಜ್ಯದ ನಾನಾ ಭಾಗಗಳಲ್ಲಿರುವ ಮತದಾರರು ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net