ಅ.15ರವರೆಗೆ ಮತದಾರರ ಸಹಿ ಸಂಗ್ರಹ ಅಭಿಯಾನ

snd congress
ಸಿಂಧನೂರಿನಲ್ಲಿ ಕಾಂಗ್ರೆಸ್‌ನಿಂದ ಮತದಾರರ ಹಕ್ಕುಗಳಿಗಾಗಿ ಸಹಿ ಸಂಗ್ರಹ ಅಭಿಯಾನ ನಡೆಯಿತು. ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ ವೈ., ಪ್ರಮುಖರಾದ ರಾಜುಗೌಡ ಬಾದರ್ಲಿ, ಖಾಜಿ ಮಲಿಕ್ ವಕೀಲ, ಎಂ.ಲಿಂಗಪ್ಪ ದಢೇಸುಗೂರು, ದಾಕ್ಷಾಯಿಣಿ ಮಾಲಿಪಾಟೀಲ್ ಇತರರಿದ್ದರು.
Published on

ಸಿಂಧನೂರು: ನಗರದ ಆರನೇ ವಾರ್ಡ್‌ನಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಘಟಕದಿಂದ ಮತದಾರರ ಹಕ್ಕುಗಳಿಗಾಗಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ ವೈ. ಮಾತನಾಡಿ, ವೋಟ್ ಚೋರ್ ಗದ್ದಿ ಚೋಡ್ ಅಭಿಯಾನದ ಅಂಗವಾಗಿ ಈಗಾಗಲೇ ಆಗಸ್ಟ್‌ನಲ್ಲಿ ಮೇಣದಬತ್ತಿ ಮೆರವಣಿಗೆ ಹಾಗೂ ಪ ್ರತಿಭಟನೆ ನಡೆಸಲಾಗಿದೆ. ಆಂದೋಲನದ ಮುಂದುವರಿದ ಭಾಗವಾಗಿ ಸೆ.15 ರಿಂದ ಅ.15ರವರೆಗೆ ಸಹಿ ಸಂಗ್ರಹ ಅಭಿಯಾನ ನಡೆಸಿ, ಸಹಿಗಳನ್ನು ಕ್ರೋಡೀಕರಿಸಿ ಎಐಸಿಸಿಗೆ ರವಾನಿಸಲಾಗುವುದು ಎಂದು ತಿಳಿಸಿದರು.

ಮುಖಂಡ ರಾಜುಗೌಡ ಬಾದರ್ಲಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿ ಮಲಿಕ್ ವಕೀಲ, ಗ್ರಾಮೀಣ ಘಟಕದ ಅಧ್ಯಕ್ಷ ಎಂ.ಲಿಂಗಪ್ಪ ದಢೇಸುಗೂರು, ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ದಾಕ್ಷಾಯಿಣಿ ಮಾಲಿ ಪಾಟೀಲ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ ಹಟ್ಟಿ, ಸದಸ್ಯರಾದ ಆಲಂಬಾಷಾ, ಎಚ್.ಬಾಷಾ, ಶಬ್ಬೀರ್ ನಾಯಕ, ಮುಖಂಡರಾದ ಅಮ್ಜದ್ ಖಾನ್, ಛತ್ರಪ್ಪ ಕುರುಕುಂದಿ, ಪ್ರಭುರಾಜ್, ಕರೀಂಸಾಬ್, ಇಲಿಯಾಸ್ ಪಾಷಾ, ತನ್ವೀರ್, ಹನುಮೇಶ ನಾಯಕ, ಬಾಲ ನಾಯಕ, ಇಮಾಮ್ ಜಾಗೀರದಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net