

ಗುಳೇದಗುಡ್ಡ: ಚುನಾವಣೆ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ನೋಂದಣಿ ಅಭಿಯಾನ ಆರಂಭವಾಗಿದೆ. ಆಯಾ ಮತಗಟ್ಟೆಗಳಿಗೆ ತೆರಳಿ ಯುವ ಮತದಾರರು ನೋಂದಣಿ ಮಾಡಿಸಿಕೊಳ್ಳಬೇಕೆಂದು ತಹಸೀಲ್ದಾರ್ ಮಂಗಳಾ ಎಂ. ತಿಳಿಸಿದ್ದಾರೆ.
2025 ಜ.1, ಏ.1, ಜು. 1, ಹಾಗೂ ಅ.1ಕ್ಕೆ 18 ವರ್ಷ ಪೂರೈಸುವ, 17 ವರ್ಷ ವಯಸ್ಸು ಮೇಲ್ಪಟ್ಟ ಎಲ್ಲ ಅರ್ಹ ಮತದಾರರು ಮತದಾರರ ಪಟ್ಟಿಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಒಟ್ಟು 4 ಅರ್ಹತಾ ದಿನಾಂಕಗಳು ಇರುತ್ತವೆ ಎಂದು ತಿಳಿಸಿದ್ದಾರೆ.
ಚುನಾವಣೆ ಆಯೋಗದ ನಿರ್ದೇಶನದಂತೆ ನ. 23 ಮತ್ತು ನ. 24ರಂದು ಜಿಲ್ಲೆಯಲ್ಲಿ ಮತದಾರರ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಂದು ಆಯಾ ಭಾಗದ ಮತಗಟ್ಟೆ ಅಧಿಕಾರಿಗಳು/ ಮೇಲ್ವಿಚಾರಕರು ಬೆಳಗ್ಗೆ 9 ರಿಂದ ಸಂಜೆ 5ರ ವರೆಗೆ ಮತಗಟ್ಟೆಗಳಲ್ಲಿ ಹಾಜರಿದ್ದು ಅರ್ಜಿ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
18 ವರ್ಷ ಮೇಲ್ಪಟ್ಟ ಮತದಾರರು ತಮ್ಮ ಭಾಗದ ಮತಗಟ್ಟೆಗಳಿಗೆ ಭೇಟಿ ನೀಡಿ, ಮತಗಟ್ಟೆ ಅಧಿಕಾರಿಗಳ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ನಮೂನೆ-6 ರಲ್ಲಿ, ಮೃತ ಮತದಾರರು/ ಡಬಲ್ ನೋಂದಣಿಯಾದಂತಹ ಮತದಾರರ ಹೆಸರನ್ನು ಕಡಿಮೆಗೊಳಿಸಲು ನಮೂನೆ- 7ರಲ್ಲಿ ಹಾಗೂ ಮತದಾರ ಗುರುತಿನ ಚೀಟಿಯಲ್ಲಿ ತಿದ್ದುಪಡಿ/ ಸ್ಥಳಾಂತರವಿದ್ದಲ್ಲಿ ನಮೂನೆ-8ರಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ತಹಸೀಲ್ದಾರರು ತಿಳಿಸಿದ್ದಾರೆ.