ಮತದಾರರ ಋಣ ತೀರಿಸುವೆ

12TLR1
Published on

ತಲ್ಲೂರ: ಯರಗಟ್ಟಿ ತಾಲೂಕಿನ ಸಮಸ್ತ ಜನತೆ ಬೆಳಗಾವಿ ಬಿಡಿಸಿಸಿ ಬ್ಯಾಂಕ್​ ನಿರ್ದೇಶಕನಾಗಿ ಅವಿರೋಧವಾಗಿ ಆಯ್ಕೆಮಾಡಿ ನನ್ನ ಜನ್ಮದಿನಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ. ೇತ್ರದ ಮತದಾರರ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.

ಸಮೀಪದ ಯರಝರ್ವಿ ಗ್ರಾಮದಲ್ಲಿ ಶನಿವಾರ ವಿಶ್ವಾಸ ವೆದ್ಯ ಅಭಿಮಾನಿಗಳು ಹಮ್ಮಿಕೊಂಡಿದ್ದ ಅವರ ಜನ್ಮದಿನ ಹಾಗೂ ಸಂಗೀತ ಸಂಜೆ, ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ, ಪಿಯುಸಿ ಕಾಲೇಜು ಮಂಜೂರಾತಿಗೆ ಶ್ರಮಿಸಲಾಗುವುದು ಎಂದರು.

ಮುನವಳ್ಳಿಯ ಮುರುಂದ್ರ ಸ್ವಾಮೀಜಿ ಮಾತನಾಡಿದರು. ಚಿದಾನಂದ ಸ್ವಾಮೀಜಿ, ಗ್ರಾಪಂ ಅಧ್ಯ ಬಸವ್ವ ನಂದಿ, ಯರಗಟ್ಟಿ ಎಪಿಎಂಸಿ ಅಧ್ಯ ನೀಲಕಂಠ ಶೀದಬಸನ್ನವರ, ಕಾಂಗ್ರೆಸ್​ ಮುಖಂಡ ಪ್ರಕಾಶ ವಾಲಿ, ಬೆಮುಲ್​ ನಿರ್ದೇಶಕ ಶಂಕರ ಇಟ್ನಾಳ, ಗುತ್ತಿಗೆದಾರ ಮಹಾಂತೇಶ ಉರಬ್ಬಿನ್ನವರ, ಬಂಗಾರೆಪ್ಪ ಹರಳಿ, ಅಶ್ವತ್ಥ ವೆದ್ಯ, ಜಿಪಂ ಮಾಜಿ ಸದಸ್ಯ ಕೀರಪ್ಪ ಹದ್ದನ್ನವರ, ಚಾಯಪ್ಪ ಹುಂಡೇಕಾರ, ಮಲಿಕಸಾಬ್​ ಬಾಗವಾನ, ಆರ್​.ಕೆ.ಪಟಾತ, ಲಕ್ಷ$್ಮಣ ಕುಂಟಿರಪ್ಪಗೋಳ, ವಿಠ್ಠಲ ಬಂಟನೂರ, ಸಂತೋಷ ಹಾದಿಮನಿ, ಮುನವಳ್ಳಿ ಪುರಸಭೆ ಅಧ್ಯ ಸಿ.ಬಿ.ಬಾಳಿ, ಸವದತ್ತಿ ಎಪಿಎಂಸಿ ಅಧ್ಯ ಚಂದ್ರು ಜಂಬ್ರಿ, ಖ್ಯಾತ ಜಾನಪದ ಕಲಾವಿದ ಬಾಳು ಬೆಳಗುಂದಿ, ಪ್ರಕಾಶ ಸುಣಧೋಳಿ, ಯಂಕಣ್ಣ ಕಳ್ಳಿಗುದ್ದಿ, ತವನಪ್ಪ ಟೋಪ್ಪಣ್ಣವರ, ಮಂಜು ಪಾಂಚಗಿ, ವೀರೇಶ ಬ್ಯಾಹಟ್ಟಿ, ಅಶೋಕ ಕುಡಚಿ, ನಿಖಿಲ ಪಾಟೀಲ, ರಾವೇಂದ್ರ ಗಿಡ್ಡಮಲ್ಲಪ್ಪಗೋಳ, ಎಂ.ಎಂ.ಶಂಕಲಿಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net