

ತುಮಕೂರು: ನಗರ ವಿಧಾನಸಭಾ ಕ್ಷೇತ್ರದ ರೈಲ್ವೆ ನಿಲ್ದಾಣ ರಸ್ತೆ ಮತಗಟ್ಟೆ ಸಂಖ್ಯೆ 148ರಲ್ಲಿ ಆ್ಯಂಬ್ಯುಲೆನ್ಸ್‌ನಲ್ಲಿ ಬಂದು ಸಂಪಂಗಿರಾಮು ಮತ ಚಲಾವಣೆ ಮಾಡುವ ಮೂಲಕ ಮಾದರಿ ಎನಿಸಿದರು.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಂಪಗಿರಾಮು ಕಳೆದ ನಾಲ್ಕು ತಿಂಗಳಿನಿಂದ ಎದ್ದು ಓಡಾಡಲು ಆಗದ ಕಾರಣ ಮನೆಯಲ್ಲೇ ಒಂದೇ ಕಡೆಮಲಗಿ ವಿಶ್ರಾಂತಿ ಪಡೆಯುತ್ತಿದ್ದರು. ಇಂತಹ ಸ್ಥಿತಿಯಲ್ಲು ಪತ್ನಿ ಜತೆ ಮತಗಟ್ಟೆ ಆ್ಯಂಬುಲೆನ್ಸ್‌ನಲ್ಲಿ ಆಗಮಿಸಿದ ಸಂಪಂಗಿರಾಮು ಅವರನ್ನು ಸ್ಟ್ರೆಚರ್ ಸಮೇತ ಚುನಾವಣಾ ಸಿಬ್ಬಂದಿಯ ಅವರನ್ನು ಮತಗಟ್ಟೆಗೆ ಕರೆದೊಯ್ಯದು ಮತ ಚಲಾಯಿಸಿದರು. ಈ ಸಂದರ್ಭದಲ್ಲಿ ಆರೋಗ್ಯಕ್ಕಿಂತ ದೇಶ ಮುಖ್ಯ ಎಂದ ಸಂಪಗಿರಾಮು ಪತ್ನಿ ಹೇಳುವ ಮೂಲಕ ಮತದಾನದಿಂದ ದೂರ ಉಳಿಯುವರಿಗೆ ತಿಳಿಹೇಳಿದರು.