ಪ್ರಜಾಪ್ರಭುತ್ವದ ಬೇರು ಬಲಗೊಳಿಸಲು ಮತದಾನ ಮಾಡಿ

24arsph1ep
Published on

ಅರಸೀಕೆರೆ: ಮತದಾನದಿಂದ ಮಾತ್ರ ಪ್ರಜಾಪ್ರಭುತ್ವದ ಬೇರು ಬಲಗೊಳ್ಳಲು ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ನಾರಾಯಣ್ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಚುನಾವಣಾ ಸಾಕ್ಷರತಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಹದಿನೆಂಟು ವರ್ಷ ಮೇಲ್ಪಟ್ಟವರು ಚುನಾವಣೆಯಲ್ಲಿ ತಪ್ಪದೆ ಪಾಲ್ಗೊಳ್ಳಬೇಕು. ತಮ್ಮ ಹಕ್ಕು ಚಲಾಯಿಸಿದರೆ ಸಂವಿಧಾನದ ಆಶಯ ಈಡೇರಿಸಿದಂತಾಗುತ್ತದೆ ಎಂದು ಹೇಳಿದರು.
ರಸಪ್ರಶ್ನೆ, ಪ್ರಬಂಧ, ಸ್ಥಳದಲ್ಲಿಯೇ ಚಿತ್ರ ಬರೆಯುವುದು ಸೇರಿದಂತೆ ಇತರ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಪ್ರಾಧ್ಯಾಪಕರಾದ ಡಿ.ಪ್ರಮೀಳಾ, ಎಂ.ಟಿ.ಪುಟ್ಟಸ್ವಾಮಿ, ಚಿತ್ರಕಲಾ, ಡಾ.ಹರೀಶ್‌ಕುಮಾರ್ ಇತರರು ಇದ್ದರು. ಜಾವಗಲ್, ಗಂಡಸಿ, ಬಾಣಾವರ ಸೇರಿದಂತೆ ವಿವಿಧ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net