ಮತ ಕಳ್ಳತನ ರಾಷ್ಟ್ರವಿರೋಧಿ ಚಟುವಟಿಕೆ

17Kanapur1
Published on

ಖಾನಾಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮತದಾರರ ಹಕ್ಕುಗಳ ಯಾತ್ರೆ ಬೆಂಬಲಿಸಿ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ನೂರಾರು ಕಾರ್ಯಕರ್ತರೊಂದಿಗೆ ಪಟ್ಟಣದಿಂದ ನಂದಗಡದ ಸಂಗೊಳ್ಳಿ ರಾಯಣ್ಣ ಸಮಾಧಿ ವರೆಗೆ ಭಾನುವಾರ ಪಾದಯಾತ್ರೆ ನಡೆಸಿದರು.

ನಂತರ ಮಾತನಾಡಿ, ಚುನಾವಣಾ ಆಯೋಗ ಮಾರಾಟ ಮಾಡಲಾಗಿದೆಯೇ, ಚುನಾವಣಾ ಆಯೋಗ ಬಿಜೆಪಿ ಸಲಹೆ ಮೇರೆಗೆ ಕೆಲಸ ಮಾಡುತ್ತಿದೆಯೇ ಎಂದು ದೇಶಾದ್ಯಂತ ವಿರೋಧ ಪಕ್ಷಗಳು ಅನುಮಾನ ವ್ಯಕ್ತಪಡಿಸಿವೆ. ಮತ ಕಳ್ಳತನದಂತಹ ರಾಷ್ಟ್ರವಿರೋಧಿ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿದರು.

ದಾಖಲೆಗಳೊಂದಿಗೆ ರಾಹುಲ್ ಗಾಂಧಿ ಮತಕಳ್ಳತನ ಬಹಿರಂಗಪಡಿಸಿದ್ದು, ಬಿಹಾರದಲ್ಲಿ ವೋಟ್ ಚೋರ್ ಗಡ್ಡಿ ಚೋಡ್ (ವೋಟ್ ಅಧಿಕಾರ ಯಾತ್ರೆ) ಕಾರ್ಯಕ್ರಮ ಜಾರಿಗೆ ತರುತ್ತಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಾಂತೇಶ ರಾವುತ್, ಈಶ್ವರ ಘಾಡಿ, ಮುಖಂಡ ಲಕ್ಷ್ಮಣ ಮದಾರ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಿ ಮದಾರ, ಮಲ್ಲಿಕಾರ್ಜುನ ವಾಲಿ, ಮಹಾದೇವ ಕೋಲಿ, ಸುರೇಶ ಜಾಧವ, ಸೈಸ್ ಸುತಾರ, ಭರತೇಶ ಟೊರೋಜಿ, ವೈಷ್ಣವಿ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net