

ಅರಕೇರಾ: ಮತದಾನ ಪ್ರತಿಯೊಬ್ಬರ ಹಕ್ಕು ಹಾಗೂ ಕರ್ತವ್ಯ ಆಗಿದೆ. ಯಾವುದೇ ಜಾತಿ, ಧರ್ಮ ನೋಡದೆ, ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಬೇಕೆಂದು ಪಿಡಿಒ ಬೂದೆಪ್ಪ ಯಾದವ ಹೇಳಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಏರ್ಪಡಿಸಿದ್ದ ಮತದಾನ ಜಾಗೃತಿ ಜಾಥದಲ್ಲಿ ಭಾನುವಾರ ಮಾತನಾಡಿದರು. ಮತ ಮಾರಾಟ ಮಾಡುವ ವಸ್ತುವಲ್ಲ. ಉತ್ತಮ ಪ್ರಜೆಯನ್ನು ಆಯ್ಕೆ ಮಾಡಬಹುದಾದ ಬಹುದೊಡ್ಡ ಶಕ್ತಿಯಾಗಿದೆ. ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತವಾಗಿ ನಡೆಸುವುದರೊಂದಿಗೆ ಶೇ.100 ಮತದಾನ ಮಾಡಬೇಕು ಎಂದು ತಿಳಿಸಿದರು. ಗ್ರಾಪಂ, ಗಾಂಧಿ ವೃತ್ತ, ವಾಲ್ಮೀಕಿ ವೃತ್ತ, ಬಸವ ವೃತ್ತ, ಮಠದ ಓಣಿ, ಗೌಡಗೇರಾ ಓಣಿ ಸೇರಿ ಪಟ್ಟಣದ ವಿವಿಧೆಡೆ ಜಾಗೃತಿ ಮೂಡಿಸಲಾಯಿತು. ಗ್ರಾಪಂ ಸಿಬ್ಬಂದಿ ಯಮುನಪ್ಪ ಕುಂಬಾರ, ಇಬ್ರಾಹಿಂ ಇತರರಿದ್ದರು.