ಪುರಸಭೆ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ!

24 svr 02
Published on

ಸವಣೂರ: ಪುರಸಭೆ ಉಪಾಧ್ಯಕ್ಷ ಅಲ್ಲಾವುದ್ದೀನ್ ಮನಿಯಾರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ದಿನಾಂಕ ನಿಗದಿಪಡಿಸಲು ಒತ್ತಾಯಿಸಿ ಅಧ್ಯಕ್ಷೆ ಶೈಲಾ ಮುದಿಗೌಡ್ರ ಮೂಲಕ ಮುಖ್ಯಾಧಿಕಾರಿ ಕೃಷ್ಣ ಕಟ್ಟಿಮನಿ ಅವರಿಗೆ ಕೆಲ ಸದಸ್ಯರು ಗುರುವಾರ ಮನವಿ ಸಲ್ಲಿಸಿದರು.

ಮಹೇಶ ಮುದಗಲ್ಲ ಹಾಗೂ ಇತರ ಸದಸ್ಯರು ಅವಿಶ್ವಾಸ ಪತ್ರಕ್ಕೆ ಸಹಿ ಹಾಕಿ, ಪುರಸಭೆ ಉಪಾಧ್ಯಕ್ಷರ ಕಾರ್ಯಗಳು ನಮಗೆ ತೃಪ್ತಿಕರವಾಗಿಲ್ಲ. ಹೀಗಾಗಿ ಅವರಿಗೆ ಬೆಂಬಲ ನೀಡಿದ್ದ 18 ಸದಸ್ಯರು ಬೆಂಬಲ ಹಿಂಪಡೆದಿರುವುದರಿಂದ ಅವರು ಬಹುಮತ ಕಳೆದುಕೊಂಡಿದ್ದಾರೆ. ಆದ್ದರಿಂದ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಲು ಸಭೆ ಆಯೋಜಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಸದಸ್ಯರಾದ ಶಂಕ್ರಪ್ಪ ದೊಡ್ಡಮನಿ, ನಾಗರಾಜ ನರೇಗಲ್ಲ, ಆಮಿನಾಬೀ ಮಕಾನದಾರ, ಸದಾನಂದ ಕೆಮ್ಮಣಕೇರಿ, ಸೂಫಿಯಾ ಚುಡಿಗಾರ, ಭಾರತಿ ಹುಲ್ಲೂರ, ಅಬ್ದುಲಖಾದರ ಪರಾಶ, ಅಜೀಮಬೇಗ ಮಿರ್ಜಾ, ಖಮರುನ್ನಿಸಾ ಪಟೇಲ, ಬೀಬಿಕೋಬ್ರಾ ಡಂಬಳ, ಮಹದೇವಪ್ಪ ಮಹೇಂದ್ರಕರ, ಅಬ್ದಲ್​ನಾಶೀರ ಖಿದಮತಗಾರ, ಪದ್ಮಾವತಿ ದೊಡ್ಡಮನಿ, ಆಯಿಶಾಫರಹೀನ ಚಂದುಬಾಯಿ, ಜೀನತ್​ಬಾನು ಹುಲಗೂರ, ಲೀಲಾ ಗಾಣಗೇರ, ರೇಖಾ ಬಂಕಾಪೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net