ಕಾಂಗ್ರೆಸ್‌ಗೆ ದಲಿತರ ಅಭಿವೃದ್ಧಿಗಿಂತ ಓಟು ಮುಖ್ಯ; ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಕಿಡಿ

9 bgp sc morcha
Published on

ಬಾಗೇಪಲ್ಲಿ: ಕಾಂಗ್ರೆಸ್ ಮೋಸದ ರಾಜಕಾರಣ ಬಯಲಾಗುತ್ತಿದ್ದಂತೆ ದಲಿತರು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ, ಸಂಸತ್‌ನಲ್ಲಿ ಅಧಿಕೃತ ವಿರೋಧ ಪಕ್ಷ ಸ್ಥಾನ ಪಡೆಯುವ ಯೋಗ್ಯತೆಯನ್ನು ಕಳೆದುಕೊಂಡಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದರು.

ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಸಮಿತಿ ಕಾರ್ಯಕಾರಿಣಿ ಮಾತನಾಡಿ, ಕಾಂಗ್ರೆಸ್ 70 ವರ್ಷಗಳಿಂದ ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ದಲಿತ ಸಮುದಾಯಗಳನ್ನು ಬಳಸಿಕೊಂಡೇ ಅಧಿಕಾರಿದ ಹಿಡಿಯುತ್ತಿತ್ತು. ಅವರಿಗೆ ದಲಿತರ ಅಭಿವೃದ್ಧಿಗಿಂತ ಓಟು ಮುಖ್ಯ ಎಂದು ಆರೋಪಿಸಿದರು.

ಚುನಾವಣೆ ಸಮಯದಲ್ಲಿ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಕೂಗು ಬಂದಾಗ ಮುಖ್ಯಮಂತ್ರಿ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಎಂದು ೋಷಿಸಿ ಜಾತಿ ರಾಜಕಾರಣ ವಾಡಿ ದಲಿತರ ಓಟು ಪಡೆದುಕೊಳ್ಳುತ್ತಿರುವ ಕಾಂಗ್ರೆಸ್‌ನ್ನು ರಾಜ್ಯದಲ್ಲಿ ಕೇಳೋರಿಲ್ಲ ಲೇವಡಿ ಮಾಡಿದ ನಾರಾಯಣಸ್ವಾಮಿ, ಪಕ್ಷ ಸಂಟನೆಯಲ್ಲಿ ತೊಡಗಿಸಿಕೊಂಡು ಮುಂದಿನ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸಜ್ಜಾಗುವಂತೆ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.

ಸಂವಿಧಾನದ ಅಶಯದಂತೆ ದಲಿತರಿಗೆ ಪ್ರಾತಿನಿಧ್ಯತೆ ನೀಡಿರುವ ಬಿಜೆಪಿ ಸರ್ಕಾರ, ಕೇಂದ್ರ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನವಾನ ಕಲ್ಪಿಸಿದೆ, ರಾಷ್ಟ್ರೀಯ ಮಟ್ಟದಲ್ಲಿ ಎಸ್ಸಿ ಮೋರ್ಚಾ ಟಕ ಸ್ಥಾಪಿಸಿದೆ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಹೇಳಿದರು.

ಛಲವಾಧಿ ನಾರಾಯಣಸ್ವಾಮಿ ಅಭಿವಾನಿ ಬಳಗದಿಂದ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಅವರನ್ನು ಸನ್ಮಾನಿಸಲಾಯಿತು. ವಾಜಿ ಶಾಸಕ ನಂಜುಂಡಸ್ವಾಮಿ, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ವೆಂಕಟೇಶ್, ರಾಜ್ಯ ಉಪಾಧ್ಯಕ್ಷೆ ದೇವಿ ರಾಂಜೇಂದ್ರನ್, ಮಂಡಲಾಧ್ಯಕ್ಷ ಆರ್.ಪ್ರತಾಪ್, ಪ್ರಧಾನ ಕಾರ್ಯದರ್ಶಿಗಳಾದ ದೇವರಾಜು, ಕೃಷ್ಣಮೂರ್ತಿ, ದೇವರಾಜು, ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ವೆಂಕಟರವಣಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಪಿ.ಡಿ.ವೆಂಕಟರವಣ, ನಾಗಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net