

ಮಂಗಳೂರು: ದ.ಕ ಜಿಲ್ಲೆಯ 220 ಗ್ರಾ.ಪಂಗಳಿಗೆ ನಡೆದ ಎರಡು ಹಂತದ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ7 ಕಡೆಗಳಲ್ಲಿ ಮತ ಎಣಿಕೆ ಪ್ರಾರಂಭಗೊಂಡಿದೆ. ಮಂಗಳೂರು ತಾಲೂಕಿನ ವ್ಯಾಪ್ತಿಯ ಗ್ರಾ.ಪಂಗಳ ಮತ ಎಣಿಕೆ ಬೋಂದೆಲ್ ಮಹಾತ್ಮಗಾಂಧಿ ಸೆಂಟೆನರಿ ಕಾಂಪೊಸಿಟ್ ಪಿಯು ಕಾಲೇಜಿನಲ್ಲಿ ಪ್ರಾರಂಭ ಗೊಂಡಿದೆ.
ಬೆಳಗ್ಗೆ 7.45ಕ್ಕೆ ಸ್ಟ್ರಾಂಗ್ ರೂಂ ತೆರೆಯಲಾಗಿದ್ದು 8ಕ್ಕೆ ಸರಿಯಾಗಿ ಮತ ಎಣಿಕೆ ಶುರುವಾಯಿತು. ಏಜೆಂಟರಿಗೆ,ಸಿಬ್ಬಂದಿಗಳಿಗೆ, ಮಾಧ್ಯಮದ ಪ್ರತಿನಿಧಿಗಳಿಗೆ ಕೇಂದ್ರಕ್ಕೆ ಬರಲು ಪಾಸ್ ಮೂಲಕ ಅವಕಾಶ ನೀಡಲಾಗಿದೆ. ಕೇಂದ್ರದ ಸುತ್ತ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ವಿಧಿಸಲಾಗಿದ್ದು ಜನ ಸೇರುವುದನ್ನು ನಿರ್ಬಂಧಿಸಲಾಗಿದೆ.
ಮಂಗಳೂರಿನಲ್ಲಿ ಕೇಂದ್ರದ ಹೊರಭಾಗ ಸಾಕಷ್ಟು ಸಂಖ್ಯೆಯಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಸೇರಿರುವುದು ಕಂಡುಬಂತು. ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.