ಮತದಾನ ಬಹಿಷ್ಕರಿಸಿ ಪ್ರತಿಭಟನೆ

07-05.MDL.01
Published on

ಮುದಗಲ್: ತಾಲೂಕಿನ ಅಂಕನಾಳ-ಉಪನಾಳ ಮತದಾರರು ಮತದಾನ ಬಹಿಷ್ಕರಿಸುವ ಮೂಲಕ ಮಂಗಳವಾರ ಪ್ರತಿಭಟನೆ ನಡೆಸಿದರು.

ಅವಳಿ ಗ್ರಾಮದ ದಲಿತರ ಕೇರಿಯಲ್ಲಿ ಕುಡಿವ ನೀರು, ಸಿಸಿ.ರಸ್ತೆ, ಬೀದಿ ದೀಪ, ಶೌಚಗೃಹ ಸೇರಿ ಮೂಲ ಸೌಕರ್ಯಗಳಿಲ್ಲ. ಪ್ರತಿಸಲ ವೋಟು ಹಾಕುವುದಕ್ಕಷ್ಟೇ ಸೀಮಿತವಾಗಿದ್ದೆವೆ. ಮನೆಗಳ ಸುತ್ತಲು ಜಾಲಿ ಗಿಡಗಳು ಬೆಳೆದಿವೆ. ಬೀದಿ ದೀಪವಿಲ್ಲದೆ ಕತ್ತಲಲ್ಲಿ ಭಯದೊಂದಿಗೆ ಬದುಕಬೇಕಾಗಿದೆ. ಈ ಬಗ್ಗೆ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ 150ಕ್ಕೂ ಅಧಿಕ ಮತದಾರರು ಮತದಾನ ಬಹಿಷ್ಕರಿಸುವ ಮೂಲಕ ಜಿಲ್ಲಾ ಆಡಳಿತಕ್ಕೆ ಒತ್ತಾಯ ಮಾಡುತ್ತಿದ್ದೇವೆಂದು ನಿವಾಸಿಗಳು ದೂರಿದರು.

ನಿವಾಸಿಗಳಾದ ಕೆಂಚಪ್ಪ ಹಾದಿಮನಿ, ಹನುಮಂತ, ಶಿವಪ್ಪ, ಲಕ್ಷ್ಮಣ, ಸಿದ್ದಪ್ಪ,ಬಸಮ್ಮ, ಲಕ್ಷ್ಮವ್ವ, ಹುಲಿಗೆಮ್ಮ, ಪವಾಡೆಮ್ಮ ಸೇರಿದಂತೆ ನೂರಾರು ಜನರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net