

ಬೇಲೂರು : ನಮ್ಮ ನಡೆ ಮತಗಟ್ಟೆಯ ಕಡೆ ಎಂಬ ವಿನೂತನ ಕಾರ್ಯಕ್ರಮದ ಮೂಲಕ ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯಿಂದ ಮತದಾನದ ಬಗ್ಗೆ ಜನರಲ್ಲಿ ಸೋಮವಾರ ಜಾಗೃತಿ ಮೂಡಿಸಲಾಯಿತು.
ಏಪ್ರಿಲ್ 26 ರಂದು ನಡೆಯಲಿರುವ ಲೋಕಸಭಾ ಚುನಾಣೆ ಅಂಗವಾಗಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸಬೇಕು ಎಂಬ ನಿಟ್ಟಿನಲ್ಲಿ ಅರೇಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಒಟ್ಟಾಗಿ ‘ಚುನಾವಣಾ ಪರ್ವ -ದೇಶದ ಗರ್ವ’ ಎಂಬ ಧ್ಯೇಯ ವಾಕ್ಯವಿರುವ ಧ್ವಜವನ್ನು ಅರೇಹಳ್ಳಿ ಗ್ರಾಪಂ ಹಾಗೂ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆರೋಹಣ ಮಾಡಿದರು. ನಂತರ ‘ಸಮಾನತೆಯ ಸಂಧಾನ- ನಿಮ್ಮ ಮತದಾನ, ಹೆಮ್ಮೆಯಿಂದ ಮತ ಚಲಾಯಿಸಿ’ ಎಂಬ ಬರಹಗಳಿರುವ ಬ್ಯಾನರ್ ಹಿಡಿದು ಅರೇಹಳ್ಳಿ ಪಟ್ಟಣದ ಮುಖ್ಯರಸ್ತೆಯಲ್ಲಿ ಜಾಥಾ ನಡೆಸಿದರು.ಕಂದಾಯ ಮತ್ತು ಗ್ರಾಪಂನ ಸಿಬ್ಬಂದಿ ಲೋಕೇಶ್, ರುದ್ರೇಶ್, ರೂಪಾ, ಗಣೇಶ್, ಅಫ್ಸರ್, ವಿರಾಜು, ಪುಟ್ಟರಾಜು ಸೇರಿದಂತೆ ಸ್ವಸಹಾಯ ಗುಂಪಿನ ಸದಸ್ಯರಿದ್ದರು.