ಮತದಾನ ಮಾಡಿ ಸಾಂವಿಧಾನಿಕ ಹಕ್ಕು ಚಲಾಯಿಸಿ

27 Dwd 4
Published on

ಧಾರವಾಡ: ಮತದಾನ ನಮ್ಮ ಸಂವಿಧಾನ ಹಕ್ಕು. ಎಲ್ಲರೂ ತಪ್ಪದೆ ಮತದಾನ ಮಾಡುವ ಮೂಲಕ ಹಕ್ಕನ್ನು ಚಲಾಯಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಸವರಾಜ ಹೆಗ್ಗನಾಯಕ ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿ, ಅಂಜುಮನ್ ಪದವಿ ಮಹಾವಿದ್ಯಾಲಯದ ಚುನಾವಣಾ ಸಾಕ್ಷರತಾ ಕ್ಲಬ್, ಸನ್ನಿಽ ಮಹಿಳಾ ಮಂಡಳ, ಲಯನ್ಸ್ ಕ್ಲಬ್ ಧಾರವಾಡ ಗ್ಯಾಲಕ್ಸಿ ಮತ್ತು ಎಂ.ಎ0. ಜೋಶಿ ನೇತ್ರ ಸಂಸ್ಥೆ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೆ ಪ್ರಭುಗಳು. ಸೂಕ್ತ ವ್ಯಕ್ತಿಗೆ ಮತ ಚಲಾಯಿಸುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು ಎಂದರು.
ನAದಾ ಗುಳೇದಗುಡ್ಡ, ಡಾ. ಎಸ್.ವೈ. ಸರಗಿರೋ, ಕೈರುದ್ದೀನ್ ಶೇಖ್, ಅಬ್ದುಲ್ ಬಡಬಡೆ, ಡಾ. ನಾಗರಾಜ ಗುದಗನವರ, ಡಾ. ಎಸ್.ವೈ. ಶೇಖ್, ಗಿರೀಶ ಸಾಲುಂಕೆ, ಲಯನ್ಸ್ ಕ್ಲಬ್ ಧಾರವಾಡ ಗ್ಯಾಲಕ್ಸಿ ಸದಸ್ಯರು, ಅಂಜುಮನ್ ಪದವಿ ಮಹಾವಿದ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net