ದುಷ್ಟ ಶಕ್ತಿ ವಿರುದ್ಧ ಮತ ಹಾಕಿ

Koppa mla
ಕೊಪ್ಪದಲ್ಲಿ ಆಯೋಜಿಸಿದ್ದ ಶೃಂಗೇರಿ ಕ್ಷೇತ್ರ ಮಟ್ಟದ ಅಲ್ಪಸಂಖ್ಯಾತರ ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿದರು. ಎಚ್.ಎಂ.ಸತೀಶ್, ಮಹಮ್ಮದ್ ಸಾಧಿಕ್, ಅನ್ನಪೂರ್ಣ ಇತರರಿದ್ದರು.
Published on

ಕೊಪ್ಪ: ಜಾತಿ, ಮತ, ಧರ್ಮ ಭೇದ ಮಾಡಿ ದೇಶವನ್ನು ಒಡೆಯುವ ದುಷ್ಟ ಶಕ್ತಿ ವಿರುದ್ಧ ಮತ ಹಾಕಿ. ಜನರ ಬದುಕು ಕಟ್ಟಿಕೊಡುವಂಥ, ಎಲ್ಲರನ್ನೂ ಸಮಾನವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುವ ಕಾಂಗ್ರೆಸ್ ಗೆಲ್ಲಿಸಿ ಎಂದು ಶಾಸಕ ಟಿ.ಡಿ.ರಾಜೇಗೌಡ ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಶೃಂಗೇರಿ ಕ್ಷೇತ್ರಮಟ್ಟದ ಅಲ್ಪಸಂಖ್ಯಾತರ ಸಭೆಯಲ್ಲಿ ಮಾತನಾಡಿ, ದೇಶವನ್ನು ಕಟ್ಟಿದ ಕೀರ್ತಿ ಎಲ್ಲ ಧರ್ಮದವರಿಗೂ ಸಲ್ಲುತ್ತದೆ. ನಾನು ಶಾಸಕನಾದ ಆರಂಭದಲ್ಲಿ ಕ್ಷೇತ್ರದಲ್ಲಿ ಕೋಮು ವಿಷಬೀಜ ಬಿತ್ತುವುದಕ್ಕೆ ಯತ್ನಿಸಿದ್ದರು. ನಾನು ಪ್ರಾರಂಭದಲ್ಲೇ ಅದಕ್ಕೆ ಕಡಿವಾಣ ಹಾಕಿದೆ ಎಂದು ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ಅಲೆಯಿದೆ. ಜಿಲ್ಲೆಯಲ್ಲಿ ಹೆಚ್ಚು ಮತ ಗಳಿಸಿಕೊಟ್ಟರೆ ಮುಂದಿನ ದಿನಗಳಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂದರು.
ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಹಮ್ಮದ್ ಸಾಧಿಕ್ ಮಾತನಾಡಿ, ಶೇ.99 ಅಲ್ಪಸಂಖ್ಯಾತರು ಕಾಂಗ್ರೆಸ್ ಪರವಾಗಿದ್ದಾರೆ. ಅಲ್ಪಸಂಖ್ಯಾತರ ಬೇಡಿಕೆಗಳು ಸಂಪೂರ್ಣ ಈಡೇರಿಲ್ಲ, ಮುಂದಿನ ದಿನಗಳಲ್ಲಿ ಈಡೇರಿಸುವ ಭರವಸೆ ಇದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳೆಮನೆ ನಟರಾಜ್, ಕೆಪಿಸಿಸಿ ವಕ್ತಾರ ಸುಧೀರ್‌ಕುಮಾರ್ ಮುರೊಳ್ಳಿ, ಶೃಂಗೇರಿ ಕ್ಷೇತ್ರ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಶಶಿಕುಮಾರ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಅನ್ನಪೂರ್ಣ ನರೇಶ್, ವಜ್ರಪ್ಪ, ಲಕ್ಷ್ಮೀನಾರಾಯಣ, ಬರ್ಕತ್ ಆಲಿ, ಎಲಿಯಾಸ್ ಪಿಂಟೋ, ಜೇಸುದಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net