ಗಮನ ಸೆಳೆದ ಶತಾಯುಷಿ ಮತದಾನ

vote- Old AGE
filter: 0; fileterIntensity: 0.0; filterMask: 0; module: photo; hw-remosaic: false; touch: (0.5037037, 0.50069445); sceneMode: 8; cct_value: 0; AI_Scene: (0, 2); aec_lux: 182.64352; aec_lux_index: 0; albedo: ; confidence: ; motionLevel: -1; weatherinfo: null; temperature: 43;
Published on

ಆಲೂರು : ತಾಲೂಕಿನ ಚಿಕ್ಕ ಕಣಗಾಲು ಗ್ರಾಮದ ಮತಗಟ್ಟೆ ಸಂಖ್ಯೆ 35 ರಲ್ಲಿ ಶತಾಯುಷಿ ನಂಜಮ್ಮ ರಾಮೇಗೌಡ (101) ಎಂಬವರು ಉತ್ಸಾಹದಿಂದ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಮಾತನಾಡಿದ ಅವರು, ದೇವೇಗೌಡ ಒಳ್ಳೆಯ ಜನ. ಹಳ್ಳಿಯ ಜನರನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಯಾರೂ ಅವರಿಗೆ ಮೋಸ ಮಾಡಬಾರದು ಎಂದರು. ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು. ಅದಕ್ಕಾಗಿ ಮತ ಹಾಕಿದ್ದೇನೆ ಎಂದು ಹೇಳಿ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net