

ಕುಶಾಲನಗರ:
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಕಾಳಿಕಾಂಬಾ ಯುವಕ ಸಂಘದ ವತಿಯಿಂದ ಸೋಮವಾರ ನಡೆದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಉತ್ಸವ 2025 ರ ವಾಲಿಬಾಲ್ ಪಂದ್ಯಾವಳಿಯಲ್ಲಿ ಕುಶಾಲನಗರದ ರಾಯಲ್ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಮದಲಾಪುರದ ಬಿ. ವೈ. ಸಿ. ತಂಡ ಪಡೆದುಕೊಂಡರೆ, ತೃತೀಯ ಸ್ಧಾನ ಕೂಡುಮಂಗಳೂರು ಶಿವಾಜಿ ಫ್ರೆಂಡ್ಸ್, ನಾಲ್ಕನೇ ಸ್ಥಾನ ಹೆಬ್ಬಾಲೆಯ ಬನಶಂಕರಿ ತಂಡ ಪಡೆದುಕೊಂಡಿತು.
ಕಬ್ಬಡಿ ಪಂದ್ಯಾವಳಿಯಲ್ಲಿ ಬ್ಯಾಡಗೊಟ್ಟ ಫ್ರೆಂಡ್ಸ್ ತಂಡ ಪ್ರಥಮ, ಹುದುಗೂರು ಕಾಳಿಕಾಂಬಾ ದ್ವಿತೀಯ ಸ್ಧಾನ ಪಡೆಯಿತು. ಮಹಿಳೆಯರ ವಿಭಾಗದ ಥ್ರೋ ಬಾಲ್ ಪಂದ್ಯಾಟದಲ್ಲಿ ಕರಾಟೆ ಕಿಂಡ್ಸ್ ತಂಡ ಪ್ರಥಮ, ಹುದುಗೂರು ಕಾಳಿಕಾಂಬಾ ದ್ವಿತೀಯ ಸ್ಧಾನ ಪಡೆದವು.
ನಂತರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಳಿಕಾಂಬಾ ಯುವಕ ಸಂಘದ ಅಧ್ಯಕ್ಷ ಐ.ಜಿ. ಶರತ್ ವಹಿಸಿ ಬಹುಮಾನ ವಿತರಣೆ ಮಾಡಿದರು.
ಇದೇ ವೇಳೆ ನಡೆದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ವಿವಿಧ ತಂಡದವರು ಅತ್ಯಾಕರ್ಷಕ ಉಡುಗೆ ತೊಡುಗೆಯ ನೃತ್ಯ, ಹಾಗೂ ಹಾಡುಗಾರಿಗೆ ಪ್ರದರ್ಶಿಸಿದರು.
ಸರ್ವೋತ್ತಮ ಸೇವಾ ಪ್ರಶಸ್ತಿ ವಿಜೇತ ಬಿ.ಎಲ್. ಸುರೇಶ್, ಅಭಿಮನ್ಯು ಆನೆ ಮಾವುತ ಐ. ಎಸ್. ವಸಂತ, ಭೀಮ್ ಹನುಮ ಸೇವಾ ಸಮಿತಿ ಅಧ್ಯಕ್ಷ ಸಜನ್ ಕಿಶೋರ್, ಹುದುಗೂರು ಗ್ರಾಮದ ಹಿರಿಯರಾದ ಟಿ. ಪಿ.ಪೂವಯ್ಯ, ಶ್ರೀ ಉಮಾಮಹೇಶ್ವರ ದೇವಾಲಯ ಸಮಿತಿ ಉಪಾಧ್ಯಕ್ಷ ಎನ್. ಎಸ್. ಮುತ್ತಪ್ಪ ಮತ್ತಿತರರು ಇದ್ದರು.