ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

Published on

ಹಾಸನ: ಯೂತ್ ರೆಡ್ ಕ್ರಾಸ್ ಘಟಕ, ಕ್ರೀಡಾ ವಿಭಾಗ, ಹೊಯ್ಸಳ ರೋವರ್ಸ್ ಕ್ರೀವ್ ಮತ್ತು ಶಾಂತಲಾ ರೇಂಜರ್ಸ್ ಘಟಕ, ತೆರಾ ಪಂಥ್ ಯುವ ಪರಿಷತ್ ಸಹಯೋಗದಲ್ಲಿ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಕಾಲೇಜಿನ ಯೂತ್ ರೆಡ್‌ಕ್ರಾಸ್ ಸಂಚಾಲಕ ಎಸ್.ಜಿ.ಪ್ರಸನ್ನ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಗಣ್ಯರು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು. ಹಿಮ್ಸ್ ಆಸ್ಪತ್ರೆ ರಕ್ತದಾನ ಕೇಂದ್ರದ ಸಂಚಾಲಕಿ ಡಾ.ನಾಗಲಕ್ಷ್ಮೀ ರಕ್ತದಾನದ ಮಹತ್ವದ ಬಗ್ಗೆ ವರಿಸಿದರು.

ತೆರಾ ಪಂಥ್ ಯುವ ಪರಿಷತ್ ಹಾಸನ ಸದಸ್ಯ ವಿಕಾಸ್ ಕೊಠಾರಿ ರಕ್ತದಾನ ಮಾಡಿದರು. ಪ್ರಾಧ್ಯಾಪಕ ಕೆ.ಎಸ್.ಪ್ರಸನ್ನ, ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣಮೂರ್ತಿ, ಸಹಪ್ರಾಧ್ಯಾಪಕರಾದ ಕೃಷ್ಣಮೂರ್ತಿ, ಉಪನ್ಯಾಸಕ ಡಾ.ಎನ್.ಸಿ.ರವಿ ಇತರರು ಇದ್ದರು. ಶಿಬಿರದಲ್ಲಿ 75 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net