

ಯಲ್ಲಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನಲ್ಲಿ ಯುವ ರೆಡ್ ಕ್ರಾಸ್ ಘಟಕ, ಎನ್ಎಸ್ಎಸ್ ಘಟಕ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಕಿಮ್್ಸ ಹುಬ್ಬಳ್ಳಿ ಆಶ್ರಯದಲ್ಲಿ ಗುರುವಾರ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ಕಿಮ್್ಸ ವೈದ್ಯಾಧಿಕಾರಿ ಡಾ. ಆತ್ಮಶ್ರೀ ಶಿಬಿರವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿ ಒಟ್ಟು 62 ಜನರು ರಕ್ತದಾನ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಡಿ.ಎಸ್. ಭಟ್ ಅಧ್ಯಕ್ಷತೆ ವಹಿಸಿದ್ದರು. ಯುವ ರೆಡ್ ಕ್ರಾಸ್ ಸಂಚಾಲಕ ಶರತ ಕುಮಾರ, ಎನ್ಸ್ಎಸ್ ಕಾರ್ಯಕ್ರಮಾಧಿಕಾರಿ ಡಿ.ಜಿ. ತಾಪಸ್, ರೇಂಜರ್ ಲೀಡರ್ ಭವ್ಯಾ ಸಿ., ಕ್ರೀಡಾ ಸಂಚಾಲಕ ಆರ್.ಡಿ. ಜನಾರ್ದನ, ಪ್ಲೇಸ್ಮೆಂಟ್ ಸಂಚಾಲಕಿ ಸುರೇಖಾ ತಡವಲ ಇತರರಿದ್ದರು.