ಕಾರ್ಖಾನೆ ಸಿಬ್ಬಂದಿಯಿಂದ ಸ್ವಯಂಪ್ರೇರಿತ ರಕ್ತದಾನ

26M.D.R.1
ರೋಟರಿ ಸಂಸ್ಥೆ, ಗೆಜ್ಜಲಗೆರೆಯ ಶಾಹಿ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್, ಮಂಡ್ಯ ರಕ್ತ ನಿಧಿ ಕೇಂದ್ರ ಮಿಮ್ಸ್ ವತಿಯಿಂದ ಶಾಹಿ ಎಕ್ಸ್ ಪೊರ್ಟ್ಸ ಕಾರ್ಖಾನೆಯ ಆವರಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
Published on

ಮದ್ದೂರು: ರೋಟರಿ ಸಂಸ್ಥೆ , ಗೆಜ್ಜಲಗೆರೆಯ ಶಾಹಿ ಎಕ್ಸ್‌ಪೋರ್ಟ್ ಪ್ರೈ.ಲಿ. ಗೆಜ್ಜಲಗೆರೆ ಹಾಗೂ ಮಂಡ್ಯ ರಕ್ತ ನಿಧಿ ಕೇಂದ್ರ ಮಿಮ್ಸ್ ವತಿಯಿಂದ ಶಾಹಿ ಎಕ್ಸ್‌ಪೋರ್ಟ್ ಕಾರ್ಖಾನೆಯ ಆವರಣದಲ್ಲಿ ಸೋಮವಾರ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.


ಶಿಬಿರದಲ್ಲಿ ಕಾರ್ಖಾನೆಯ ಸಿಬ್ಬಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದರ ಮುಖಾಂತರ 112 ಯೂನಿಟ್ ರಕ್ತ ಸಂಗ್ರಹವಾಯಿತು.
ಶಾಹಿ ಎಕ್ಸ್‌ಪೋರ್ಟ್ ಕಾರ್ಖಾನೆಯ ಜನರಲ್ ಮ್ಯಾನೇಜರ್ ರಮೇಶ್ ಬಂಡಿ ರಕ್ತದಾನ ಮಾಡುವುದರ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ. ಕಾಲಕಾಲಕ್ಕೆ ರಕ್ತದಾನ ಮಾಡುವುದು ದಾನಿಗಳ ಆರೋಗ್ಯವನ್ನು ವೃದ್ಧಿಸುತ್ತದೆ. ಜತೆಗೆ ಅನೇಕ ರೋಗಿಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ರಕ್ತದಾನ ಶಿಬಿರಗಳನ್ನು ಕಾರ್ಖಾನೆ ವತಿಯಿಂದ ಆಯೋಜಿಸಲಾಗುವುದು ಎಂದರು.

ರೋಟರಿ ಸಂಸ್ಥೆಯ ಅಧ್ಯಕ್ಷ ಎಚ್.ಪಿ.ಚನ್ನಂಕೇಗೌಡ, ಮಾಜಿ ಅಧ್ಯಕ್ಷ ಎಂ.ಸಿ.ಶಶಿಗೌಡ, ಕಾರ್ಯದರ್ಶಿ ಎ.ಲೋಕೇಶ್, ಸದಸ್ಯರಾದ ಪ್ರವೀಣ್, ಮಂಜುನಾಥ್ ನಾಯ್ಡು, ಶಿವಕುಮಾರ್, ಅರುಣಕುಮಾರ್, ರಾಮಚಂದ್ರು, ಬೋರ್ವೆಲ್ ರವಿ, ಕಾರ್ಖಾನೆಯ ಎಚ್.ಆರ್.ಶಿವಪ್ರಸಾದ್, ವಿಶ್ವನಾಥ್, ಚೇತನ್, ಲತೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net