

ವಿಜಯವಾಣಿ ಸುದ್ದಿಜಾಲ ಕುಂದಾಣ
ದೇಹದ ಸಾಮರ್ಥ್ಯ ಹೆಚ್ಚಿಸಲು ಹಾಗೂ ಆರೋಗ್ಯಕರ ಜೀವನಶೈಲಿ ಬೆಳೆಸಲು ಸಹಾಯವಾಗಲಿದೆ ಎಂದು ಜಾಲಿಗೆ ಗ್ರಾಮ ಪಂಚಾಯಿತಿ ಸಿಂಗರಹಳ್ಳಿ ಅಧ್ಯಕ್ಷ ಆನಂದ್ ಹೇಳಿದರು.
ತಾಲೂಕಿನ ಬೆಟ್ಟೇನಹಳ್ಳಿಯಲ್ಲಿ ಹನುಮಾನ್ ಸೇನೆಯಿಂದ ಪ್ರಥಮ ವರ್ಷದ ರಾಜ್ಯ ಮಟ್ಟದ
ವಾಲಿಬಾಲ್ ಪಂದ್ಯಾವಳಿಯಲ್ಲಿ ಮಾತನಾಡಿದರು. ಇತ್ತೀಚಿನ ಯುವಪೀಳಿಗೆಯು ದುಶ್ಚಟಗಳಿಂದ ದೂರ ಉಳಿಯುವ ಉದ್ದೇಶದಿಂದ ವಾಲಿಬಾಲ್ನಂತಹ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ವಿಶ್ವನಾಥಪುರ ಇನ್‌ಸ್ೆಕ್ಟರ್ ಶ್ರೀನಿವಾಸ್ ಮಾತನಾಡಿ, ಬೆಟ್ಟೆನಹಳ್ಳಿಯಲ್ಲಿ ಒಂದಲ್ಲೊಂದು ಪಂದ್ಯಾವಳಿ ನಡೆಯುತ್ತಾ ಇರುತ್ತವೆ ಇದು ಸ್ವಾಗತಾರ್ಹವಾಗಿದೆ ಎಂದರು. ಗ್ರಾಮೀಣ ಕ್ರೀಡೆಗಳಿಗೆ ಇಲ್ಲಿನ ಎಲ್ಲ ಮುಖಂಡರ ಪೋತ್ಸಾಹ ಪ್ರಶಂಸನೀಯ. ಶಿಕ್ಷಣದ ಜತೆಗೆ ಕೌಶಲ ಆಧಾರಿತ ಚಟುವಟಿಕೆಯಲ್ಲಿ ಕಾಳಜಿವಹಿಸಬೇಕು ಕ್ರೀಡಾಕೂಟಗಳಲ್ಲಿ ಉದ್ಯೋಗಾವಕಾಶಗಳು ಇರುವುದರಿಂದ ಈ ಬಗ್ಗೆ ಹೆಚ್ಚು ಗಮನ ನೀಡಬಹುದು ಎಂದರು.
26 ತಂಡ ಭಾಗಿ:
26 ತಂಡಗಳು ಆಗಮಿಸಿ ಉತ್ತಮ ಪ್ರದರ್ಶನ ನೀಡಿವೆ, ಪ್ರಥಮ ಬಹುಮಾನ ಕುಮಟ ತಾಲೂಕಿನವರು 15 ಸಾವಿರ ರೂ.ನಗದು ಟ್ರೋಫಿ ವಿಜೇತರಾಗಿದ್ದಾರೆ ಎಂದು ದ್ವೀತಿಯ ಬಹುಮಾನ ಬೆಟ್ಟಹಳ್ಳಿಯ ಯುವ ತಂಡ 7. 5 ಸಾವಿರ ನಗದು ಟ್ರೋಫಿ ಹಾಗೂ ಪಾರಿತೋಷಕ ಪಡೆದಿದ್ದಾರೆ, ತೃತೀಯ ತಂಡ 5 ಸಾವಿರ ರೂ.ನಗದು ಹಾಗೂ ಪಾರಿತೋಷಕ ಹಾಗೂ ಟ್ರೋಫಿ ದಕ್ಕಿಸಿಕೊಂಡಿದ್ದಾರೆ ಎಂದು ಪಂಚಾಯಿತಿ ಸದಸ್ಯ ಬೆಟ್ಟನಹಳ್ಳಿ ಮಹೇಶ್ ಬಾಬು ತಿಳಿಸಿದರು.