

ಮಂಜೇಶ್ವರ: ಉಪಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟ ಕೊಡ್ಲಮೊಗರು ಶ್ರೀವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ರಕ್ಷಕ-ಶಿಕ್ಷಕ ಸಂದ ಅಧ್ಯಕ್ಷ ಅಬ್ದುಲ್ ಮಜೀದ್ ಉದ್ಘಾಟಿಸಿದರು. ಪ್ರಾಂಶುಪಾಲ ವಿಜಯ ಕುವಾರ್ ಶುಭಹಾರೈಸಿದರು.
ಡಿ.ಎಸ್.ಜಿ.ಎ. ಕಾರ್ಯದರ್ಶಿ ಸಂತೋಷ ಕುವಾರ್, ರಕ್ಷಕ-ಶಿಕ್ಷಕ ಸಂದ ಸದಸ್ಯ ಉಸ್ಮಾನ್, ವಾತೃಸಂಘದ ಅಧ್ಯಕ್ಷೆ ರಿಯಾನಾ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಉದಯ ಕುವಾರ್ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಕೃಷ್ಣವೇಣಿ ಬಿ. ವಂದಿಸಿದರು. ಕಿಶೋರ್ ನಿರೂಪಿಸಿದರು.
ಆತಿಥೇಯ ಶ್ರೀವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆ ಬಾಲಕ ಮತ್ತು ಬಾಲಕಿಯರ ತಂಡ ಸಬ್‌ಜೂನಿಯರ್ ವಿಭಾಗ ಮತ್ತು ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ, ಸೀನಿಯರ್ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿತು. ಎಸ್.ಡಿ ಪಿ.ಎಚ್.ಎಸ್. ಧರ್ಮತಡ್ಕದ ಜೂನಿಯರ್ ವಿಭಾಗದ ಬಾಲಕರ ತಂಡ ದ್ವಿತೀಯ, ಸೀನಿಯರ್ ವಿಭಾಗದ ಬಾಲಕರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು. ಇನ್‌ಫೆಂಟ್ ಜೀಸಸ್ ಮಂಜೇಶ್ವರದ ಬಾಲಕಿಯರ ತಂಡ ಜೂನಿಯರ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿತು.