ಕುಪ್ಪೆಪದವು ಶಾಲೆಯಲ್ಲಿ ವಾಲಿಬಾಲ್ ಪಂದ್ಯಾಟ

22-volleyball
Published on

ಗುರುಪುರ: ಕುಪ್ಪೆಪದವು ಕಲ್ಲಾಡಿ ಪ್ರೌಢಶಾಲೆಯ ನೇತೃತ್ವದಲ್ಲಿ ಬುಧವಾರ ಕುಪ್ಪೆಪದವು ಕಿಲೆಂಜಾರು ಅರಮನೆ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಗುರುಪುರ ಹೋಬಳಿಯ ಪ್ರೌಢಶಾಲಾ ಮಟ್ಟದ ವಾಲಿಬಾಲ್ ಪಂದ್ಯಾಟ ನಡೆಯಿತು.

ಕಟ್ಟೆಮಾರ್ ಕೊರಗಜ್ಜ ಕ್ಷೇತ್ರದ ಜನಾರ್ದನ ಪಂದ್ಯಾಟ ಉದ್ಘಾಟಿಸಿದರು. ಕಲ್ಲಾಡಿ ಪ್ರೌಢ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವರಾಮ, ಕಿಲೆಂಜಾರು ಅರಮನೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಧೀರ್ ಜೈನ್, ಉಪಾಧ್ಯಕ್ಷ ಶೇಖ್ ಅಬ್ದುಲ್ಲ, ಸದಸ್ಯ ತಿಮ್ಮಪ್ಪ ಶೆಟ್ಟಿ, ಮುಖ್ಯಶಿಕ್ಷಕ ಪಿಲಿಫ್ ಆರ್ಥರ್ ಡಿಸೋಜ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಶೇಖರ ಕಡ್ತಲ, ಕನಾಟಕ ರಾಜ್ಯ ಸಹ ಶಿಕ್ಷಕರ ಸಂಘ ಬೆಂಗಳೂರು ಇದರ ದ.ಕ. ಜಿಲ್ಲಾ ಘಟಕದ ಕಾರ್ಯದರ್ಶಿ ಮಾರ್ಕ್ ಮೆಂಡೋನ್ಸ, ಸಿಆರ್‌ಪಿ ಪುಷ್ಪಾವತಿ, ಮುಚ್ಚೂರು ಪ್ರೌಢಶಾಲಾ ಮುಖ್ಯಶಿಕ್ಷಕಿ ಸುರೇಖಾ ಮತ್ತಿತರರು ಉಪಸ್ಥಿತರಿದ್ದರು.

ಕಲ್ಲಾಡಿ ಶಾಲಾ ಮುಖ್ಯಶಿಕ್ಷಕಿ ಮೀನಾಕ್ಷಿ ಸ್ವಾಗತಿಸಿದರು. ಕಲ್ಲಾಡಿ ಪ್ರೌಢಶಾಲಾ ಶಿಕ್ಷಕ ಡಾ.ಪ್ರಸಾದ್ ನಿರೂಪಿಸಿದರು. ಶಿಕ್ಷಕಿ ಸಂಧ್ಯಾ ವಂದಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪಾಲಕರು, ವಿವಿಧ ಶಾಲಾ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು. ಗುರುಪುರ ಹೋಬಳಿ ಮಟ್ಟದ 32 ಪ್ರೌಢಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜೇತ ತಂಡಗಳು

ಬಾಲಕರ ವಿಭಾಗದಲ್ಲಿ ವಾಮಂಜೂರಿನ ವಿದ್ಯಾಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ಮಳಲಿಯ ಸರ್ಕಾರಿ ಪ್ರೌಢಶಾಲೆ ದ್ವಿತೀಯ ಪ್ರಶಸ್ತಿ ಗಳಿಸಿತು. ಬಾಲಕಿಯರ ವಿಭಾಗದಲ್ಲಿ ಮುಚ್ಚೂರು ಸರ್ಕಾರಿ ಪ್ರೌಢಶಾಲೆ ಪ್ರಥಮ ಹಾಗೂ ನೆಲ್ಲಿತೀರ್ಥ ಎಂಡಿಆರ್‌ಎಸ್ ದ್ವಿತೀಯ ಪ್ರಶಸ್ತಿ ಗಳಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net