

ಮಂಡ್ಯ: ನಗರದ ಪಿಇಟಿ ಕ್ರೀಡಾಂಗಣದಲ್ಲಿ ಡಿ.22 ರಿಂದ 25ರ ವರೆಗೆ 2023-24ನೇ ಸಾಲಿನ ಪುರುಷರ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಹಗಲು ಮತ್ತು ಹೊನಲು ಬೆಳಕಿನ ವಾಲಿಬಾಲ್ ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಎಂ.ನಂಜುಂಡಸ್ವಾಮಿ ತಿಳಿಸಿದರು.
ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮತ್ತು ಜನತಾ ಶಿಕ್ಷಣ ಟ್ರಸ್ಟ್(ಪಿಇಟಿ) ಮಂಡ್ಯ ಸಹಯೋಗದಲ್ಲಿ ಏರ್ಪಡಿಸಿರುವ ಈ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ 22ರ ಬೆಳಗ್ಗೆ 11 ಗಂಟೆಗೆ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಬೆಳಗಾವಿ ವಿಟಿಯು ಉಪಕುಲಪತಿ ಡಾ.ಎಸ್.ವಿದ್ಯಾಶಂಕರ್, ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಜಂಟಿ ಕಾರ್ಯದರ್ಶಿ ಡಾ.ಬಲ್ಜೀತ್ ಸಿಂಗ್ ಸೆಖೊನ್, ಪಿಇಟಿ ಕಾರ್ಯದರ್ಶಿ ಶಿವಪ್ರಸಾದ್ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಂತಾರಾಷ್ಟ್ರಿಯ ವಾಲಿಬಾಲ್ ಆಟಗಾರ ಬಿ.ಎಸ್.ಹರಿಪ್ರಸಾದ್ ಭಾಗವಹಿಸಲಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ರೀಡಾಕೂಟದಲ್ಲಿ 125 ತಂಡ, 1500 ಆಟಗಾರರು, 250ಕ್ಕೂ ಹೆಚ್ಚು ವ್ಯವಸ್ಥಾಪಕರು ಹಾಗೂ ತರಬೇತುದಾರರು ಪಾಲ್ಗೊಳ್ಳಿದ್ದಾರೆ. ಎಲ್ಲರಿಗೂ ಸಕಲ ವ್ಯವಸ್ಥೆ ಮಾಡಲಾಗಿದೆ. ಒಟ್ಟು 128 ಪಂದ್ಯ ನಡೆಯಲಿದ್ದು, ಲೀಗ್, ಸೆಮಿಫೈನಲ್, ಫೈನಲ್ ಮಾದರಿಯಲ್ಲಿರಲಿದೆ. 25ರಂದು ಸಮಾರೋಪದಲ್ಲಿ ಕೆ.ಎಸ್.ವಿಜಯಾನಂದ ಅಧ್ಯಕ್ಷತೆಯಲ್ಲಿ ವಿಟಿಯು ರೆಜಿಸ್ಟ್ರಾರ್ ಡಾ.ಬಿ.ಇ.ರಂಗಸ್ವಾಮಿ, ಪಿಇಟಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ರಾಜ್ಯ ವಾಲಿಬಾಲ್ ಅಸೋಷಿಯನ್ ಅಧ್ಯಕ್ಷ ಡಾ.ಚಂದ್ರಕುಮಾರ್, ಅಂತಾರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಆಟಗಾರ ಅನಿಲ್ ಉಪಸ್ಥಿತರಿರುವರು ಎಂದು ವಿವರಿಸಿದರು.
ಪಿಇಟಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಉಪಪ್ರಾಂಶುಪಾಲ ಡಾ.ಎಸ್.ವಿನಯ್, ಅನಂತಪದ್ಮನಾಭಪ್ರಭು, ಆರ್.ವಿ.ವಿದ್ಯಾ, ಡಾ.ಕೋದಂಡರಾಮ ಇದ್ದರು.