ಶಾಲಾ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ : ಮೂಡುಬಿದಿರೆ ತಾಲೂಕುಮಟ್ಟದ ಪಂದ್ಯಾಟ

New Project (6)
Published on

ಮೂಡುಬಿದಿರೆ: ತಾಲೂಕುಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟ ಅಲಂಗಾರಿನ ಸಂತ ಥೋಮಸ್ ವಿದ್ಯಾಸಂಸ್ಥೆಯ ಮೈದಾನದಲ್ಲಿ ಗುರುವಾರ ಉದ್ಘಾಟಿಸಲಾಯಿತು.

ಧರ್ಮಗುರು ಮೇಲ್ವಿನ್ ನೋರೋನ್ಹ ಅಧ್ಯಕ್ಷತೆ ವಹಿಸಿ ಪಂದ್ಯಾಟ ಉದ್ಘಾಟಿಸಿದರು. ಪುರಸಭಾ ಸದಸ್ಯ ಪಿ.ಕೆ.ಥೋಮಸ್, ಮೂಡುಬಿದಿರೆ ವಾಲಿಬಾಲ್ ಅಸೋಶಿಯೇಷನ್ ಅಧ್ಯಕ್ಷ ಡಾ.ವಿನಯ್ ಆಳ್ವ, ಎಸ್‌ಕೆಎಫ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ತೇಜಸ್ ಆಚಾರ್ಯ, ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ನವೀನ್ ಪುತ್ರನ್, ನಾಗೇಶ್ ಕುಮಾರ್, ಶಿವಾನಂದ ಕಾಯ್ಕಿಣಿ, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ರಾಜೇಶ್ ಕಡಲಕೆರೆ, ಎಡ್ವರ್ಡ್ ಸೆರಾವೋ, ರಾಜ ಡಿಸೋಜ, ಜಾನೆಟ್ ಮಿರಾಂದ, ಉಭಯ ಶಾಲಾ ಮುಖ್ಯಶಿಕ್ಷಕಿಯರಾದ ಸಿಲ್ವಿಯ ಡೇಸಾ, ಅಲ್ಫೋನ್ಸಾ, ದೈಹಿಕ ಶಿಕ್ಷಣ ಶಿಕ್ಷಕ ಉದಯ್ ಮತ್ತಿತರರಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದಿರೆ ತಾಲೂಕು ಹಾಗೂ ಸಂತ ಥೋಮಸ್ ವಿದ್ಯಾಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಪಂದ್ಯಾಟ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net